ಜವಳಗೇರಾ; ಇಂದು ಸಾಮೂಹಿಕ ವಿವಾಹ
ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದ ಮಾಳಿಂಗರಾಯ ದೇವಸ್ಥಾನದ ಆವರಣದಲ್ಲಿ ಏ.11ರಂದು ಯುಗಾದಿ ಪಾಢ್ಯ ನಿಮಿತ್ತ ಮಾಳಿಂಗರಾಯ ದೇವರ ಹೇಳಿಕೆ ಮತ್ತು ಮಧ್ಯಾಹ್ನ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಮಹಾಪ್ರಸಾದ ಕಾರ್ಯಕ್ರಮಗಳು ಜರುಗಲಿವೆ ಎಂದು ಸಮಿತಿಯವರು ತಿಳಿಸಿದ್ದಾರೆ. ಗ್ರಾಮದಲ್ಲಿ ಕನಕಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ, ಸುಕಾಲಪೇಟೆಯ ಹನುಮಂತಯ್ಯ ಗುರುವಿನ, ತುರ್ವಿಹಾಳ ಮಾದಯ್ಯ ಗುರುವಿನ, ಜವಳಗೇರಿಯ ಪೂಜಾರಿ ಹನುಮಂತಪ್ಪ ಮತ್ತು ಪೂಜಾರಿ ಬೀರಪ್ಪ ಇವರುಗಳ ಸಾನ್ನಿಧ್ಯದಲ್ಲಿ ಜವಳಗೇರಿಯ ಮಾಳಿಂಗರಾಯ ದೇವಸ್ಥಾನ ಸಮಿತಿ ಮತ್ತು ಕನಕದಾಸ ಯುವಕ ಸಂಘ ಹಾಗೂ ಗ್ರಾಮದ ಸಕಲ ಸದ್ಭಕ್ತರ ಆಶ್ರಯದಲ್ಲಿ ಕಾರ್ಯಕ್ರಮಗಳು ಜರುಗುವವು. ಜವಳಗೇರಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಳಿಂಗರಾಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದ್ದಾರೆ.
ಹೊಟ್ಟೆನೋವು:ವ್ಯಕ್ತಿ ಆತ್ಮಹತ್ಯೆ
ರಾಯಚೂರು: ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಬೇಸತ್ತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಬಸಪ್ಪ ಎಂದು ಗುರುತಿಸಲಾಗಿದೆ. ಈತ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಅದರಿಂದ ಪಾರಾಗಲು ಮದ್ಯ ಸೇವಿಸುತ್ತಿದ್ದ. ನೋವು ತಾಳಲಾರದೆ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ಪದಾಧಿಕಾರಿಗಳು
ದೇವದುರ್ಗ: ದಲಿತ ಸಂಘರ್ಷ ಸಮಿತಿಯ ಬೊಮ್ಮನಾಳ ಗ್ರಾಮ ಘಟಕದ ಸಂಚಾಲಕರಾಗಿ ಕೆ. ಮಲ್ಲಿಕಾರ್ಜುನ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಂಚಾಲಕ ಮರಿಲಿಂಗಪ್ಪ ಕೋಳೂರು ವಕೀಲರು ತಿಳಿಸಿದ್ದಾರೆ. ಈಚೆಗೆ ಬೊಮ್ಮನಾಳ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಸಭೆ ಸೇರಿ ದಲಿತ ಸಂಘರ್ಷ ಸಮಿತಿ ಬೊಮ್ಮನಾಳ ಗ್ರಾಮ ಘಟಕ ಅಸ್ತಿತ್ವಕ್ಕೆ ತರಲಾಗಿದೆ. ಸಂಘಟನಾ ಸಂಚಾಲಕರಾಗಿ ಕೆ. ಶರಣಬಸವ, ನಿಜಲಿಂಗಪ್ಪ, ಚನ್ನಬಸವ ಹಾಗೂ ಖಜಾಂಚಿಯಾಗಿ ವೀರೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಪ್ರಭುಲಿಂಗಪ್ಪ ಹೇಮನಾಳ ಸೇರಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

