ಮತದಾರರಿಗೆ ಆಸೆ, ಆಮಿಷ ತೋರಿಕೆ ಅಪರಾಧ: ಮಂಜುಳಾ
ರಾಯಚೂರು: ಜಿಲ್ಲೆಯ ಎಲ್ಲ 7 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮೇ 5ರಂದು ನಡೆಯಲಿದ್ದು, ಚುನಾವಣೆಯನ್ನು ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಂಡಿದೆ. ಮತದಾರರಿಗೆ ಯಾವುದೇ ರೀತಿಯ ಆಮಿಷ ಒಡ್ಡುವುದು ಅಪರಾಧ ಎಂದು ಜಿಲ್ಲಾಡಳಿತ ತಿಳಿಸಿದೆ.
ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಹಣದ ಆಸೆ, ಆಮಿಷ ಒಡ್ಡುವುದು ಅಪರಾಧವಾಗಿದ್ದು, ಹಣ ನೀಡುವುದು ಹಾಗೂ ಹಣ ಪಡೆಯುವುದು ಇವೆರಡೂ ಲಂಚಗುಳಿತನದ ಅಪರಾಧವಾಗುತ್ತವೆ. ಹಣದ ಅಥವಾ ವಸ್ತು ರೂಪದಲ್ಲಿ ಪಡೆಯುವುದು ಅಪರಾಧ ಎಂದು ಪರಿಗಣಿಸಲಾಗುವುದು. ಇಂಥ ಅಪರಾಧಕ್ಕೆ ಒಂದು ವರ್ಷ ಮತ್ತು ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಈ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ ಎಂದು ಎಚ್ಚರಿಸಲಾಗಿದೆ.
ಇದಲ್ಲದೇ ಯಾವುದೇ ವ್ಯಕ್ತಿ, ಅಭ್ಯರ್ಥಿ ಅಥವಾ ಮತದಾರ, ಅಥವಾ ಇನ್ನ್ಯಾರನ್ನಾದರೂ ಯಾವುದೇ ರೀತಿಯಲ್ಲಿ ಹೆದರಿಸುವುದು, ಗಾಯಗೊಳಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇಂಥ ಚಟುವಟಿಕೆಗಳ ಮೇಲೆ ನಿಗಾಯಿರಿಸಲು ಜಿಲ್ಲಾದ್ಯಂತ ಚಲಿಸುವ ತಂಡಗಳನ್ನು(ಫ್ಲೈಯಿಂಗ್ ಸ್ಕ್ವ್ಯಾಡ್) ರಚಿಸಲಾಗಿದೆ. ಈ ತಂಡಗಳು ಲಂಚ ನೀಡುವ ಹಾಗೂ ಅದನ್ನು ಸ್ವೀಕರಿಸುವ ಮತ್ತು ಮತದಾರರನ್ನು ಬೆದರಿಸುವ ಪ್ರಕರಣಗಳನ್ನು ಗಮನಿಸಿ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸಲಿವೆ ಎಂದು ಸಹಾಯಕ ಆಯುಕ್ತೆ ಎನ್. ಮಂಜುಶ್ರೀ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

