ವ್ಯಾಯಾಮದಿಂದ ರಕ್ತದೊತ್ತಡ ನಿಯಂತ್ರಣ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.10
ಅತಿಯಾದ ಕೊಬ್ಬುರಹಿತ ಆಹಾರ ಸೇವನೆ, ಕಡಿಮೆ ಪ್ರಮಾಣದಲ್ಲಿ ಉಪ್ಪು ಸೇವನೆಯಿಂದ, ನಿಯಮಿತ ವ್ಯಾಯಾಮದಿಂದ ಜೀವನದಲ್ಲಿ ರಕ್ತದೊತ್ತಡ ನಿಯಂತ್ರಿಸಬಹುದಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನಿ ಸಲಹೆ ನೀಡಿದರು.
ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಆಕ್ಸ್‌ಫರ್ಡ್ ಪದವಿ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ಜರುಗಿದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಧಿಕ ರಕ್ತದೊತ್ತಡ ಮಾರಕ: ಅಧಿಕ ರಕ್ತದೊತ್ತಡವು ಜನಸಾಮಾನ್ಯರಲ್ಲಿ ಹೃದಯಾಘಾತ, ಪಾರ್ಶ್ವವಾಯು, ದೃಷ್ಟಿಹೀನತೆ ಮತ್ತು ಮೂತ್ರ ಪಿಂಡದ ಕಾಯಿಲೆಗಳಿಗೆ ಕಾರಣವಾಗಿದೆ. ಇದರಿಂದ ಏಷ್ಯಾದಲ್ಲಿ ಪ್ರತಿ ವರ್ಷ 15 ಲಕ್ಷ ಜನ ಇದರಿಂದ ಮರಣ ಹೊಂದುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಡಾ. ಅಮ್ಜದ್ ಶರೀಫ್ ಮಾತನಾಡಿ, ವ್ಯಕ್ತಿಯ 45ನೇ ವಯಸ್ಸಿನ ನಂತರ ಕಂಡು ಬರುವ ದೈಹಿಕ ಆರೋಗ್ಯದ ಸಮಸ್ಯೆಗಳು ಅವರ ಹದಿಹರೆಯ ಅವಧಿಯಲ್ಲಿನ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದ್ದು, ಈ ದಿಶೆಯಲ್ಲಿ ಯುವ ಜನಾಂಗ ಹಚ್ಚೆಚ್ಚು ಪೌಷ್ಟಿಕ ಆಹಾರ, ಋತುಕಾಲದಲ್ಲಿಯ ಹಣ್ಣುಗಳನ್ನು ಸೇವಿಸುವುದರ ಜೊತೆಗೆ ಯೋಗ, ಧ್ಯಾನ, ದೈಹಿಕ ಕಸರತ್ತುಗಳ ಮೂಲಕ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕೆಂದು ಹೇಳಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಪ್ರಾಚಾರ್ಯರಾದ ಶಿಲ್ಪಾ ಶ್ರೀನಿವಾಸ ಮಾತನಾಡಿದರು.
ಬಹುಮಾನ ವಿತರಣೆ: ಇದೇ ವೇಳೆ 'ಜನಸಂಖ್ಯಾ ಸ್ಥಿರತೆ' ಎಂಬ ವಿಷಯದ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಭಾಗ್ಯವತಿ, ಮುತ್ತಣ್ಣ ಸಿ., ಶಿವನಾಗಮ್ಮ ಬಹುಮಾನ ವಿತರಿಸಲಾಯಿತು.
ವೇದಿಕೆ ಮೇಲೆ ಪ್ರಾಚಾರ್ಯ ಕೆ.ಸತ್ಯನಾರಾಯಣ ಶೆಟ್ಟಿ, ಹಿರಿಯ ಆರೋಗ್ಯ ಸಂದರ್ಶಕಿ ಎ.ಐ. ಪಾಟೀಲ್ ಸೇರಿದಂತೆ ಕಾರ್ಯಕ್ರಮದಲ್ಲಿ ಉಪನ್ಯಾಸಕಾರದ ಚಂದ್ರಶೇಖರ, ಬೇಬಿ, ಶ್ರೀನಿವಾಸ ಯಾಳಗಿ, ಅಮಿತ ಕುಮಾರರೆಡ್ಡಿ, ಸೈಯದ್ ತನ್ವೀರ್, ಮಹಮ್ಮದ್ ಮುರ್ತುಜಾ, ಸಿರಾಜಾ ಪಾಶಾ ಹಾಗೂ ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಶ್ರೀನಿವಾಸ ಯಾಳಗಿ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

