ಇಂದು ಎನಗೆ ಗೋವಿಂದ ನಿನ್ನಯ...
ರಾಯಚೂರು: ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೇ...
ಮಂತ್ರಾಲಯದ ಶ್ರೀರಾಯರ ಕುರಿತ ಈ ಹಾಡು ಅಂದು ಪಿ.ಬಿ. ಶ್ರೀನಿವಾಸ್ ಅವರ ಕಂಠದಲ್ಲಿ ಮೊಳಗಿತ್ತು. ನೆರೆದಿದ್ದ ಭಕ್ತ ವೃಂದವನ್ನು ಸಮ್ಮೋಹನಗೊಳಿಸಿದ ಕ್ಷಣಗಳವು. ಬಹುಶಃ 2009ರ ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಂಡವರು ಎಂದಿಗೂ ಈ ಅನುಭವವನ್ನು ಮರೆಯಲಾರರು.
ಮಂತ್ರಾಲಯದ ಶ್ರೀರಾಯರ ಮಠದಿಂದ ಪಿಬಿಎಸ್ ಅವರಿಗೆ 2009ರ ರಾಘವೇಂದ್ರ ತೀರ್ಥರ ಆರಾಧನಾ ಮಹೋತ್ಸವದ ವೇಳೆ ಶ್ರೀಮಠದ ಪ್ರತಿಷ್ಠಿತ ಆಸ್ಥಾನ್ ವಿದ್ವಾನ್ ಪುರಸ್ಕಾರ ಘೋಷಣೆಯಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿಯೂ ಅತೀ ಹುಮ್ಮಸ್ಸಿನಿಂದಲೇ ಮಂತ್ರಾಲಯಕ್ಕೆ ಆಗಮಿಸಿದ್ದರು.
ಶ್ರೀರಾಯರ ದರ್ಶನ ಪಡೆದಿದ್ದ ಅವರು ಆಸ್ಥಾನ್ ವಿದ್ವಾನ್ ಪುರಸ್ಕಾರ ಸ್ವೀಕರಿಸಿ, ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೇ.. ಹಾಡು ಹಾಡುವ ಮೂಲಕ ಸಭಾಂಗಣದಲ್ಲಿ ನೆರೆದಿದ್ದವರನ್ನು ಮಂತ್ರ ಮುಗ್ಧಗೊಳಿಸಿದ್ದರು. ಪಿಬಿಎಸ್ ಅವರ ಸುಶ್ರಾವ್ಯ ಕಂಠದಿಂದ ಮೂಡಿಬಂದ ಈ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಂಥ ಮಹಾನ್ ಗಾಯಕ ಶ್ರೀರಾಯರ ಭಕ್ತರಿಗೆ ಇನ್ನು ನೆನಪು ಮಾತ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

