ರಾಯಚೂರು

ಕೋಟ್ಯಂತರ ಅನುದಾನ ಲೂಟಿ

Published On :

ಕ.ಪ್ರ. ವಾರ್ತೆ, ದೇವದುರ್ಗ, ಏ.14
ದೇವದುರ್ಗ ವಿಧಾನಸಭೆ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಗಬ್ಬೂರು, ಕಾಕರಗಲ್, ಮಸರಕಲ್, ಚಿಕ್ಕಹೊನ್ನಕುಣಿ, ಯರಮಸಾಳ, ಜಾಲಹಳ್ಳಿ, ಗಲಗ, ಸೇರಿ ವಿವಿಧೆಡೆ ಭಾನುವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರು. ಅನುದಾನ ಲೂಟಿಯಾಗಿದೆ ಎಂದು ಆರೋಪಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮುಂದಿನ ದಿನಗಳಲ್ಲಿ ಅನುದಾನದ ದುರ್ಬಳಕೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಶಿವನಗೌಡ ನಾಯಕ ನಂಬಿಕೆಗೆ ಅನರ್ಹ: ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕ ಮಾತನಾಡಿ, ಹಾಲಿ ಶಾಸಕ ಕೆ.ಶಿವನಗೌಡ ನಾಯಕ ನಂಬಿಕೆಗೆ ಅರ್ಹ ವ್ಯಕ್ತಿಯಲ್ಲ. ಅವರೊಂದಿಗಿದ್ದ ಎಲ್ಲರಿಗೆ ಕೆಡುಕು ಮಾಡಿದ್ದಾರೆಂದು ಟೀಕಿಸಿದರು.
ಮಾಜಿ ಶಾಸಕ ಪಾಪಾರೆಡ್ಡಿ ಮಾತನಾಡಿ, ಮಹಾ ಭ್ರಷ್ಟ ಶಾಸಕ ಎನಿಸಿರುವ ಶಿವನಗೌಡ ನಾಯಕಗೆ ಮತ ನೀಡಿದರೆ ಮುಂದಿನ 5 ವರ್ಷಗಳ ಕಾಲ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ಅನುದಾನ ದುಬರ್ಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸೇರ್ಪಡೆ: ರಾಮನಗೌಡ ಮಸರಕಲ್, ಬುಡ್ಡನಗೌಡ ಪಾಟೀಲ್, ಬಸವರಾಜ ಭೋವಿ ಸೇರಿ ಮಸರಕಲ್ ಗ್ರಾಪಂ.ನ 12 ಸದಸ್ಯರು, ಗ್ರಾಮದ ಮುಖಂಡರು ಕಾಂಗ್ರೆಸ್ ಸೇರಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ರಾಮನಗೌಡ ರಾಮದುರ್ಗ ಅವರ ನೇತೃತ್ವದಲ್ಲಿ ನೂರಾರು ಜನ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಮಾಜಿ ಎಂಎಲ್ಸಿ ಬಸವರಾಜ್ ಪಾಟೀಲ್ ಇಟಗಿ, ಹನಮರಡ್ಡೆಪ್ಪ ಗೌಡ ಮಿಯ್ಯಾಪುರ, ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಎ.ಮಲ್ಲಿಕಾರ್ಜುನ ಪಾಟೀಲ್, ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ, ಕೆ.ಶಾಂತಪ್ಪ, ಶಿವಮೂರ್ತಿ, ನಾಗನಗೌಡ ಮಾತನಾಡಿದರು.
ತಾಲೂಕಾಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ, ವಿರುಪಾಕ್ಷಪ್ಪ ಬಳೆ, ತಾಪಂ. ಸದಸ್ಯರಾದ ಸತ್ಯನಾರಾಯಣ ನಾಯಕ, ನಿಂಗಮ್ಮ, ನಿರಂಜನ ಬಳೆ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಅಕ್ಕ ಮಹಾದೇವಿ ಪಾಟೀಲ್, ಹಿಂದುಳಿದ ಘಟಕ ಅಧ್ಯಕ್ಷ ನಾಗಪ್ಪ ಗಿರಿಣಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.