ರಾಯಚೂರು

ಚಕಿತಗೊಳಿಸಿದ ಶಿವ ಚಳಕ

Published On :

ಸಿಂಧನೂರು: ತಾಲೂಕಿನ ಪುನರ್ವಸತಿ ಕ್ಯಾಂಪ್‌ನಲ್ಲಿ ಮಾಸದ ಕೊನೆಯ ದಿನದ ಸಂಭ್ರಮದ ಅಂಗವಾಗಿ ಜನರು ಶ್ರದ್ಧಾ, ಭಕ್ತಿಯಿಂದ ಸಾಮೂಹಿಕವಾಗಿ ಶಸ್ತ್ರ ಹಾಕಿಕೊಳ್ಳುವ ಮೂಲಕ ಶಿವ ಚಳಕ ಉತ್ಸವವನ್ನು ಆಚರಿಸಿದರು.
ಕಳೆದ ಎಂಟು ವರ್ಷಗಳಿಂದ ಶಿಬು ಸರ್ದಾರ್ ಎನ್ನುವ ವ್ಯಕ್ತಿಯು 108 ಕಬ್ಬಿಣದ ಸಲಾಕೆಗಳನ್ನು ಮೈತುಂಬ ಹಾಕಿಕೊಂಡು ಕುಣಿಯುವ ದೃಶ್ಯ ವಿಸ್ಮಯವಾಗಿ ಕಾಣಿಸಿತು. ಮೈ, ಹೆಗಲು, ಮುಖದೇಹದಾದ್ಯಂತ ಶಸ್ತ್ರಗಳನ್ನು ಚುಚ್ಚಿಕೊಂಡು ಶಿವನ ದೇವಾಲಯವನ್ನು ಸುತ್ತುವರಿಯುತ್ತಿರುವಾಗ ನೆರೆದಿದ್ದ ಸಹಸ್ರಾರು ಜನರಿಂದ ಜಯಘೋಷಗಳು ಮೊಳಗಿದವು.
ಕ್ಯಾಂಪ್‌ನಿಂದ 1 ಕಿಮೀ ಅಂತರವಿರುವ ಕೆರೆಯಲ್ಲಿ ಮಿಂದು ಶಸ್ತ್ರಗಳನ್ನು ಹಾಕಿಕೊಂಡು ಬೆನ್ನಿಗೆ ದಾರಕಟ್ಟಿ ಟೆಂಗಿನಕಾಯಿಗಳನ್ನು ಎಳೆದುಕೊಂಡು ಬಂದರು. ಹತ್ತಾರು ಜನರು ಬೆನ್ನಿಗೆ ಹಾಕಿಕೊಂಡು ಶಸ್ತ್ರಕ್ಕೆ ಪೋಣಿಸಿದ ದಾರದಿಂದ ತೆಂಗಿನಕಾಯಿಗಳನ್ನು ಎಳೆದುಕೊಂಡು ಬರುತ್ತಿದ್ದ ದೃಶ್ಯ ಕೂಡ ಆಶ್ಚರ್ಯಕರವಾಗಿತ್ತು.
ಅಮರಿತ್, ವಿಶ್ವ, ಜಯಂತ್, ರಮೇಶ, ಸತ್ಯು ಅವರು ಸಹ ಶಸ್ತ್ರ ಹಾಕಿಕೊಂಡು ಮೈಮರೆತು ಕುಣಿದರು. ಶಿಬು ಚಕ್ರವರ್ತಿ, ಪುಲಿನ್ ಮೇಸ್ತ್ರಿ ಪೌರೋಹಿತ್ಯ ವಹಿಸಿದ್ದರು. ಗ್ರಾಮದ ಮುಖಂಡರಾದ ಸುನಿಲ್ ಮೇಸ್ತ್ರಿ, ಪ್ರಫುಲ್, ಕೃಷ್ಣದಾಸ್ ಬಿಸ್ವಾಸ್, ಸಾದನ್‌ಸಾನಾ, ವಾಸುದೇವ, ಅಭಿಮನ್ಯು ಮನೋಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.