ರಾಯಚೂರು

50 ಸಾವಿರ ಮತಗಳ ಅಂತರದಿಂದ ಗೆಲವು

Published On :

ದೇವದುರ್ಗ: ದೇವದುರ್ಗ ಕ್ಷೇತ್ರದಲ್ಲಿ ತಾವು 50 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುವುದಾಗಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಕೆ. ಶಿವನಗೌಡ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಟಿಎಪಿಸಿಎಂಎಸ್ ಆವರಣದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಂಸದ ಎ. ವೆಂಕಟೇಶ ನಾಯಕರಿಗೆ ಇಳಿ ವಯಸ್ಸಿನಲ್ಲಿಯೂ ರಾಜಕೀಯದ ಆಸೆ ಬಿಟ್ಟಿಲ್ಲ ಎಂದು ಟೀಕಿಸಿದರು.
ಈಗಾಗಲೇ ವೆಂಕಟೇಶ ನಾಯಕ ಅವರು ತಮ್ಮ ವಿರುದ್ಧ ಎರಡು ಬಾರಿ ಸೋಲುಂಡಿದ್ದಾರೆ. ಸದ್ಯ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಬಾರಿಯೂ ಅವರು ಸೋಲು ಕಾಣಲಿದ್ದಾರೆಂದು ಲೇವಡಿ ಮಾಡಿದರು. ರಾಯಚೂರಿನ ಕಾಂಗ್ರೆಸ್ ಮುಖಂಡರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಯಾವುದೇ ಲಾಭವಾಗದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿ.ಎಸ್. ಪಾಟೀಲ್, ಮುಖಂಡರಾದ ಶ್ಯಾಮರಾವ್ ಕುಲಕರ್ಣಿ, ನಾಗರಾಜ ಹಾಳ ವೆಂಕಟಾಪುರ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಸುರೇಶ ಎಲಿ, ಮಾಜಿ ಜಿಪಂ ಸದಸ್ಯ ಎಚ್.ಎ. ನಾಡಗೌಡ, ಡಾ. ಮಾಜೀದ್, ಆರ್.ಎಸ್. ಪಾಟೀಲ್, ಮಹ್ಮದ ಯೂನೂಸ್, ಬಸವರಾಜ ಅಮರಾಪೂರ, ಸಿದ್ದಣ್ಣ ತಾತಾ, ಡಾ. ಶಿವಶಂಕರ ಪಾಟೀಲ್, ಜಂಬಣ್ಣ, ವೀರಣ್ಣ ಬಳೆ ಸೇರಿ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.

ಅಭಿವೃದ್ಧಿಯೇ ಗೆಲವಿಗೆ ಶ್ರೀರಕ್ಷೆ: ನಾಯಕ
ದೇವದುರ್ಗ: ತಾಲೂಕಿನಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯವೇ ಗೆಲವಿಗೆ ಶ್ರೀರಕ್ಷೆಯಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ಹೇಳಿದರು. ಅವರು ಪಟ್ಟಣದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಜನತೆಗೆ ಮೋಸ, ವಿಶ್ವಾಸ ದ್ರೋಹ ತಾವು ಮಾಡಿಲ್ಲ. ತಮ್ಮ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆಂದು ಆರೋಪಿಸಿದರು.
ತಾಲೂಕಿನ ಅಭಿವೃದ್ಧಿಯ ಬಗ್ಗೆ ಮತದಾರರಿಗೆ ಗೊತ್ತಿದ್ದು ಅವರು ತಮ್ಮನ್ನು ಬೆಂಬಲಿಸಲಿದ್ದು, ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.