ಶೇ.100 ಮತದಾನಕ್ಕೆ ಪ್ರತಿಜ್ಞಾ ವಿಧಿ ಸ್ವೀಕಾರ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.16
ಬರುವ ಮೇ 5ರಂದು ಜರುಗುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶೇ.100ರಷ್ಟು ಮತದಾನಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯ ವತಿಯಿಂದ ಪ್ರತಿಜ್ಞಾವಿಧಿ ಕೈಗೊಳ್ಳಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನಿ ಪ್ರತಿಜ್ಞಾ ವಿಧಿ ಬೋಧಿಸಿದರು. ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಪ್ರತಿಯೊಬ್ಬ ವ್ಯಕ್ತಿಯು 'ಮತದಾನ ನಿಮ್ಮ ಹಕ್ಕು ತಪ್ಪದೇ ಮತ ಚಲಾಯಿಸಿ' ಎಂಬ ಘೋಷಣೆಯನ್ನು ಎಲ್ಲರಿಗೂ ತಿಳಿಸಲು ಕರೆ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿಗಳ ಚೀಟಿಯ ಮೇಲೆ 'ಮೇ
ರಬ್ಬರ್ ಸ್ಟಾಂಪ್ ವಿತರಣೆ: 5 ಮತದಾನ ದಿನ, ತಪ್ಪದೇ ಮತ ಚಲಾಯಿಸಿ' ಎಂಬ ಘೋಷಣೆಯ ಮುದ್ರಣವನ್ನು ಹಾಕಲು ರಬ್ಬರ್ ಸ್ಟಾಂಪ್ ವಿತರಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತದಾನ ಕುರಿತು ಜಾಗೃತಿ ಜಾಥಾ ಹಾಗೂ ಆಶಾ ಕಾರ್ಯಕರ್ತೆಯರಿಂದ ಮನೆಮನೆಗೆ ಭೇಟಿ ನೀಡಿ ಜಾಗೃತಿ ನೀಡಲು ಕ್ರಮ ಕೈಗೊಳ್ಳಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕರವೀರಪ್ರಭು ಕ್ಯಾಲಕೊಂಡ ಹಾಗೂ ವೈದ್ಯಾಧಿಕಾರಿ ಡಾ. ರಮ್ಯಾ ದೀಪಿಕ, ಡಾ. ವೀರೇಶ, ಡಾ. ಹೇಮಲತಾ, ಡಾ. ವಿರುಪಾಕ್ಷಿ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಾದ ಡಾ. ವಿದ್ಯಾಶ್ರೀ, ಡಾ. ಮನೋಹರ್ ಕರ್ನಾಳ, ಡಾ. ಬಸವರಾಜ, ಡಾ. ಬಸವರಾಜ ಅಂಗಡಿ, ಡಾ. ಮಂಜುನಾಥ ಅಣ್ಣಗೌಡರ್, ಡಾ. ಭಾಗೀರಥಿ, ಡಾ. ಸವಿತಾ, ಡಾ. ರಮೇಶ, ಡಾ. ಬಾಸ್ಕರ್ ಡಾ. ಅಯ್ಯನಗೌಡ ಪಾಟೀಲ್, ದೀಪಕ ಗಾಡವಿ, ಸುಮಿತ್ರಾ, ಹುಸೇನಪ್ಪ, ವೀರಣ್ಣ, ಹಿರಿಯ ಆರೋಗ್ಯ ಸಹಾಯಕರಾದ ಪಿ.ವೆಂಕಟೇಶ, ಅಂದನಪ್ಪ ಕೊಟಗಿ, ಎ.ಐ. ಪಾಟೀಲ್, ಕಿ.ಆ.ಸ(ಪು) ರಂಗನಾಥ ಜಿ, ಸೂಗುರಪ್ಪ, ಸಂಗನಗೌಡ ಮಾಲಿಪಾಟಿಲ್, ಶರಣಯ್ಯ, ಫಕೀರಚಂದ, ಗುರುಸಿದ್ದಪ್ಪ, ಕಿ.ಆ.ಸ(ಮ) ಸರಸ್ವತಿ, ರೋಷನ್ಬೀ, ವಿಜಯಲಕ್ಷ್ಮೀ, ಶುಶ್ರೂಷಕಿಯರಾದ, ಅಮೃತಮ್ಮ, ಶಿವನಮ್ಮ, ತೇಜಸ್ವಿನಿ, ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಮತದಾನದ ಜಾಗೃತಿ ಕುರಿತು ಪ್ರತಿಜ್ಞಾವಿಧಿಯಲ್ಲಿ ಭಾಗವಹಿಸಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ನೀತಿ ಸಂಹಿತೆ: ದೂರು ದಾಖಲು
ರಾಯಚೂರು: ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯ ಬಗ್ಗೆ ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ ಹಾಗೂ ಎಪಿಎಂಸಿ ಸದಸ್ಯ ರಾಮರಾವ್ ವಿರುದ್ಧ ಕೇಸ್ ದಾಖಲಾಗಿದೆ. ಸಿಂಧನೂರು ಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಈ ಇಬ್ಬರು ಪೂರ್ವ ಪರವಾನಗಿ ಇಲ್ಲದ ಎರಡು ವಾಹನಗಳನ್ನು ಜೆಡಿಎಸ್ ಧ್ವಜ ಅಳವಡಿಸಿ ಬಳಕೆ ಮಾಡಿದ್ದು, ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
-
ಪರವಾನಗಿ ರಹಿತ ವಾಹನಗಳ ಜಪ್ತಿ
ರಾಯಚೂರು: ನಗರದಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆಯ ಹಿನ್ನೆಲೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೇಳೆ ಪರವಾನಗಿಯಿಲ್ಲದೇ ಬಳಕೆ ಮಾಡಿದ್ದ 28ಕ್ಕೂ ಹೆಚ್ಚಿನ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಅವರು ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆಗೆ ಕಾರ್ಯಕರ್ತರನ್ನು ಕರೆತರಲು ಪರವಾನಗಿಯಿಲ್ಲದ 27 ವಿವಿಧ ವಾಹನಗಳನ್ನು ಬಳಕೆ ಮಾಡಿದ್ದು ಅದನ್ನು ಪತ್ತೆ ಮಾಡಿದ ಡಿವೈಎಸ್ಪಿ ಡಾ. ದಿವ್ಯಾ ಗೋಪಿನಾಥ್ ಅವರು ವಶಪಡಿಸಿಕೊಂಡರು.
ಅದೇ ರೀತಿ ಜೆಡಿಯು ಅಭ್ಯರ್ಥಿ ನೂರ್ ಮಹ್ಮದ್ ಅವರು ನಾಮಪತ್ರ ಸಲ್ಲಿಕೆ ವೇಳೆ ಪರವಾನಗಿಯಿಲ್ಲದೇ ತಂದಿದ್ದ 8 ಬೈಕ್ಗಳನ್ನು ಸಹ ಜಪ್ತಿ ಮಾಡಲಾಗಿದೆ. ಈ ಬಗ್ಗೆ ನಗರದ ಸದರ್ ಬಜಾರ್, ನೇತಾಜಿ ನಗರ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

