ರಾಯಚೂರು

ನಾಯಕ ಪರ ಪತ್ನಿ ಲಕ್ಷ್ಮೀ ಮತಯಾಚನೆ

Published On :

ಮುದಗಲ್: ಲಿಂಗಸ್ಗೂರು ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿವೃತ್ತ ಡಿಐಜಿಪಿ ಟಿ.ಆರ್. ನಾಯಕ ಅವರ ಪರವಾಗಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಅವರ ಪತ್ನಿ ಲಕ್ಷ್ಮೀ .ಟಿ. ನಾಯಕ ಅವರು  ಮನೆ ಮನೆಗೆ ತೆರಳಿ ಮತಯಾಚಿಸಿದರು.
ಪಟ್ಟಣದ ಕಿಲ್ಲಾದಲ್ಲಿ ಮನೆ ಮನೆಗೆ ತೆರಳಿ ಮಹಿಳೆಯರಿಗೆ ಭೇಟಿಯಾಗಿ ಬಿಜೆಪಿಗೆ ಮತದಾನ ನೀಡಲು ಮತಯಾಚಿಸಿದರು. ಈ ಕುರಿತು ಪತ್ರಿಕೆಯ ಜೊತೆಗೆ ಮಾತನಾಡಿದ ಅವರು ನಾನು ನನ್ನ ಪತಿಯವರ ಪರವಾಗಿ ಮಹಿಳೆಯರನ್ನು ಸಂಪರ್ಕಿಸಿ ಮತಯಾಚಿಸುತ್ತಿದ್ದೇನೆ.
ಸಾಮಾನ್ಯ ಜೀವನ ನಡೆಸಿದ ನನ್ನ ಪತಿರಾಯರು ಜನತೆಯ ಮನಸ್ಸನ್ನು ಗೆಲ್ಲುವವರಾಗಿದ್ದಾರೆ. ನಾನು ಇಂದು ಬೆಳಿಗ್ಗೆಯಿಂದ ಪಟ್ಟಣದಲ್ಲಿ ಮತಯಾಚನೆ ಮಾಡುತ್ತಿದ್ದು, ಎಲ್ಲರ ಬೆಂಬಲವೂ ನನಗೆ ದೊರಕಿದೆ ನನ್ನ ಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎನ್ನುವ ದೃಢತೆ ಕೂಡ ನನ್ನಲ್ಲಿದೆ ಎಂದು ಹೇಳಿದರು. ಮಹಿಳೆಯರನ್ನು ನೇರವಾಗಿ ಭೇಟಿಯಾಗಿ ಮತಯಾಚಿಸುತ್ತಿರುವುದು ನನಗೆ ಹೆಮ್ಮೆ, ಸಂತಸ ತರುತ್ತಿದೆ. ಮುಸ್ಲಿಂ ಸಮಾಜ ಸೇರಿದಂತೆ ವಿವಿಧ ಸಮಾಜದವರು ನಮಗೆ ಸ್ಥಳೀಯರು ಎನ್ನುವ ಉದ್ದೇಶದಿಂದ ಪ್ರೋತ್ಸಾಹಿಸಿ ಚುನಾವಣೆ ಪ್ರಚಾರಕ್ಕೆ ರಂಗು ತರುತ್ತಿದ್ದಾರೆ. ನನ್ನ ಪತಿರಾಯರ ಗೆಲುವು ಖಂಡಿತ ಎನ್ನುವ ಸಂದೇಶವನ್ನು ಮತದಾರರು ನೀಡುತ್ತಿದ್ದಾರೆ ಎಂದರು.
ಮತಯಾಚನೆಯಲ್ಲಿ ಲಕ್ಷ್ಮೀಬಾಯಿ ರಾಠೋಡ, ಭಾಗ್ಯಶ್ರೀ ರಾಮಪ್ಪ, ರಜಿಯಾಬೇಗಂ, ಮುಮ್ತಾಜಬೇಗಂ, ಫಾತಿಮಾ, ಶರಣಪ್ಪ ದೇಸಾಯಿ, ಮಹಿಬೂಬಪಾಷಾ, ರಹಿಮಾನ ಕಾಲೇಗಾರ, ಮಹಿಳೆಯರು ಸೇರಿದಂತೆ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.