ರಾಯಚೂರು

ಬಾಂಬ್ ಸ್ಫೋಟ: ಖಂಡನೆ

Published On :

ಸಿಂಧನೂರು: ಬೆಂಗಳೂರು ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಸುಜುಕಿ ಸ್ಕೂಟರ್ ಗಾಡಿಯಲ್ಲಿ ಇಟ್ಟಿದ್ದ  ಬಾಂಬ್ ಸ್ಫೋಟಕ್ಕೆ ಖಂಡನೆ ವ್ಯಕ್ತವಾಗಿದೆ. ಅಖಿಲ ಕರ್ನಾಟಕ ಕನ್ನಡ ಚಳುವಳಿ ರಾಜ್ಯ ಸಂಚಾಲಕ ಕೆ. ಬಾಳಪ್ಪ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ವಿಧಾನಸಭೆಯ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಇಂತಹ ಅನಾಹುತ ಸಂಭವಿಸಿದೆ. ಹದಿನೆಂಟು ಜನರಿಗೆ ಗಾಯಾಗಳಾಗಿವೆ. ಇದಕ್ಕೆ ಕಾರಣರಾದವರನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿ, ಜನ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ, ಶಾಂತಿ, ಸುವ್ಯವಸ್ಥೆ  ಕಾಪಾಡಬೇಕೆಂದು ಕಾಟಿಬೇಸ ಅಧ್ಯಕ್ಷ ಹಸನ್ ಟೇಲರ್, ವೆಂಕಟೇಶ ಕಟ್ಟಿಮನಿ, ಸಲೀಂ ಜವಳಗೇರಾ, ತಿಮ್ಮಣ್ಣ ಯಾದವ್, ಆಂಜನೇಯ ಬಾರಕೇರ, ರಮೇಶ ನಾಗಲೀಕರ ಮತ್ತಿತರರು ಒತ್ತಾಯಿಸಿದ್ದಾರೆ.
ವಿವಿಧ ಪದಾಧಿಕಾರಿಗಳ ಆಯ್ಕೆ
ಸಿಂಧನೂರು: ಅಖಿಲ ಕರ್ನಾಟಕ ಡಾ.ಬಿ.ಆರ್. ಅಂಬೇಡ್ಕರ್ ಮಹಾಸಭಾ ಅಲ್ಪಸಂಖ್ಯಾತ ಹಿಂದುಳಿದ ದಲಿತ ರಾಜ್ಯ ಸಮಿತಿಯಿಂದ ಗ್ರಾಮ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಾಲೂಕಾಧ್ಯಕ್ಷ ಹುಲುಗಪ್ಪ ಮೇಗಳಮನಿ ತಿಳಿಸಿದ್ದಾರೆ. ಗ್ರಾಮ ಘಟಕದ ಅಧ್ಯಕ್ಷರಾಗಿ ನಾಗರಾಜ. ಬಿ., ಉಪಾಧ್ಯಕ್ಷರಾಗಿ ಪಾಪಣ್ಣ ಚಲುವಾದಿ ಸಾಲಗುಂದ, ಚಂದ್ರಶೇಖರ ಮೇಗಳಮನಿ ಪ್ರಧಾನ ಕಾರ್ಯದರ್ಶಿ, ಶೀಲಪ್ಪ ಕಾರ್ಯದರ್ಶಿ, ಮಾರುತಿ, ಜಮೀರ್, ಸಹ ಕಾರ್ಯದರ್ಶಿ, ಹನುಮಂತ, ಕನಕ ಸಂಘಟನಾ ಕಾರ್ಯದರ್ಶಿ, ಖಜಾಂಚಿಯಾಗಿ ರಮೇಶ, ಲಕ್ಷಣರನ್ನು ನೇಮಕ ಮಾಡಲಾಯಿತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.