ರಾಯಚೂರು

3 ನಾಮಪತ್ರ ತಿರಸ್ಕೃತ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.18
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ರಾಯಚೂರು ನಗರ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಿಗೆ ಗುರುವಾರ ನಡೆದು, ಒಟ್ಟು ಸಲ್ಲಿಕೆಯಾದ 171 ನಾಮಪತ್ರಗಳ ಪೈಕಿ ಮೂರು ನಾಮಪತ್ರಗಳು ಮಾತ್ರ ತಿರಸ್ಕೃತಗೊಂಡಿವೆ.
ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳಿಗೆ ಏ.17ರಂದು ಕೊನೆಗೊಂಡ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯಲ್ಲಿ 106 ಅಭ್ಯರ್ಥಿಗಳು ಒಟ್ಟು 171 ನಾಮಪತ್ರ ಸಲ್ಲಿಸಿದ್ದರು. ಅವುಗಳ ಪೈಕಿ ಮಸ್ಕಿಯಲ್ಲಿ ಜೆಡಿಯು ಅಭ್ಯರ್ಥಿ ಆಂಜನೇಯ ಸೇರಿದಂತೆ ಮೂವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ.
ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರ ಆಸ್ತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಾಮಪತ್ರಗಳ ಪರಿಶೀಲನೆ ಕಾರ್ಯ ಏ.19ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಚುನಾವಣೆ ವಿಭಾಗ ತಿಳಿಸಿದೆ.
ವೆಚ್ಚ ನಿರ್ವಹಣೆ ವೀಕ್ಷಕರ ನೇಮಕ
ರಾಯಚೂರು: ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆ ವೆಚ್ಚ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ರಾಯಚೂರು ಗ್ರಾಮೀಣ ಹಾಗೂ ರಾಯಚೂರು ನಗರ ಕ್ಷೇತ್ರಕ್ಕೆ ಚುನಾವಣೆ ವೆಚ್ಚಗಳ ನಿರ್ವಹಣಾ ವೀಕ್ಷಕರಾಗಿ ವಿ.ಕೆ.ಸಿಂಗ್, ಮಾನವಿ ಹಾಗೂ ದೇವದುರ್ಗ ಕ್ಷೇತ್ರಕ್ಕೆ ಬಿ.ಆರ್.ಸಿಂಧೆ, ಲಿಂಗಸ್ಗೂರು ಹಾಗೂ ಸಿಂಧನೂರು ಮತ್ತು ಮಸ್ಕಿ ಕ್ಷೇತ್ರಕ್ಕೆ ಸಿಯಾ ಶರಣ್ ನೇಮಕಗೊಂಡಿದ್ದು, ಸಾರ್ವಜನಿಕರು ತಮ್ಮ ದೂರು ಅಥವಾ ಯಾವುದೇ ಅಹವಾಲುಗಳನ್ನು ಇವರಿಗೆ ಸಲ್ಲಿಸಬಹುದೆಂದು ಜಿಲ್ಲಾಡಳಿತ ತಿಳಿಸಿದೆ.
ಕ್ಷೇತ್ರಗಳ ವೀಕ್ಷಕರ ನೇಮಕ
ರಾಯಚೂರು: ಜಿಲ್ಲೆಯಲ್ಲಿ  ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ವೀಕ್ಷಕರನ್ನು ನೇಮಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ವೀಕ್ಷಕರಾಗಿ ಬಿ. ಆನಂದ ಬಾಬು, ರಾಯಚೂರು ನಗರ ಕ್ಷೇತ್ರದ ವೀಕ್ಷಕರಾಗಿ ದೇವಶಿಸ್ ಬ್ಯಾನರ್ಜಿ, ಮಾನವಿ ಕ್ಷೇತ್ರದ ವೀಕ್ಷಕರಾಗಿ ಡಿ.ಜಯಪ್ರಸಾದ್, ದೇವದುರ್ಗ ಕ್ಷೇತ್ರದ ವೀಕ್ಷಕರಾಗಿ ಶೈಲೇಂದ್ರ ಬಹಾದೂರ್, ಲಿಂಗಸ್ಗೂರು ಕ್ಷೇತ್ರದ ವೀಕ್ಷಕರಾಗಿ ರಾಜೇಂದ್ರ ಪ್ರಸಾದ್ ಓಝಾ ನೇಮಕಗೊಂಡಿದ್ದಾರೆ. ಅದೇ ರೀತಿ ಸಿಂಧನೂರು ಕ್ಷೇತ್ರಕ್ಕೆ ವೀಕ್ಷಕರಾಗಿ ಫೆಡಲಿಸ್ ಟೋಪ್ಟೊ, ಮಸ್ಕಿ ಕ್ಷೇತ್ರಕ್ಕೆ ವೀಕ್ಷಕರಾಗಿ ಮತ್ಸುತಂಗ್ ಪ್ಯಾಟೋನ್ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಸಾರ್ವಜನಿಕರು ತಮ್ಮ ದೂರು ಅಥವಾ ಯಾವುದೇ ಅಹವಾಲುಗಳನ್ನು ಅವರಿಗೆ ಸಲ್ಲಿಸಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಉಜ್ವಲ್ ಕುಮಾರ್ ಘೋಷ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.