ರಾಯಚೂರು

ಮತ ಜಾಗೃತಿ: ಮಕ್ಕಳಿಂದ ಪ್ರಭಾತ್ಫೇರಿ

Published On :

ಮುದಗಲ್: ವಿಧಾನಸಭೆ ಚುನಾವಣೆಯಲ್ಲಿ ಮತಚಲಾಯಿಸುವಂತೆ ಸಮೀಪದ ತಲೇಖಾನ ಗ್ರಾ.ಪಂ. ವ್ಯಾಪ್ತಿಯ ಹಡಗಲಿ, ತಲೇಖಾನ ಗ್ರಾಮಗಳಲ್ಲಿ ಶಾಲಾ ಮಕ್ಕಳಿಂದ ಮತದಾನದ ಜಾಗೃತಿ ಹಮ್ಮಿಕೊಳ್ಳಲಾಗಿತ್ತು. ಮತದಾರರಲ್ಲಿ ಅರಿವು ಮೂಡಿಸುವ ಅಂಗವಾಗಿ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ಪ್ರಭಾತ್ ಫೇರಿ ಮಾಡಲಾಯಿತು.
ಮೆರವಣಿಗೆಯಲ್ಲಿ ಮತದಾನ ಮಾನವನ ಹಕ್ಕು, ಅಧಿಕ ಸಂಖ್ಯೆಯಲ್ಲಿ ಜನರು ಮತ ಚಲಾಯಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣವಾಗುತ್ತದೆ. ಮತವನ್ನು ಹಣ, ಹೆಂಡಕ್ಕೆ ಮಾರದಿರಿ ಎಂಬು ಘೋಷಣೆಗಳನ್ನು ಕೂಗಿದರು. ಪ್ರಭಾತ್ ಫೇರಿಯಲ್ಲಿ ಪಿಡಿಒ ಚನ್ನಮಲ್ಲಯ್ಯ ಸ್ವಾಮಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಸಾಹುಕಾರ, ಮುಖ್ಯಗುರು ಹರಿಶ್ಚಂದ್ರ ನಾಯ್ಕ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶಂಭುಲಿಂಗಪ್ಪ ಸಾಹುಕಾರ, ಶಿಕ್ಷಕ ಶರಣಪ್ಪ, ಹುಸೇನಿ, ವೆಂಕನಗೌಡ, ನೀರುಪಾದಿ, ಮಹಾಂತೇಶ ಮತ್ತಿತರರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.