ರಾಯಚೂರು

ನಾಳೆ ಅಂಬೇಡ್ಕರ್ ಜಯಂತ್ಸುತ್ಸವ

Published On :

ಸಿಂಧನೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ)ಯಿಂದ ತಾಲೂಕಿನ ಗೊರೇಬಾಳ ಗ್ರಾಮದ ಚರ್ಚ್ ಮೈದಾನದಲ್ಲಿ ಏ.22ರಂದು ಮ.2.30ಕ್ಕೆ ಡಾ. ಅಂಬೇಡ್ಕರರ 122ನೇ ಹಾಗೂ ಡಾ. ಬಾಬು ಜಗಜೀವನ್ ರಾಂ ಅವರ 106ನೇ ಜಯಂತ್ಯುತ್ಸವ ನಿಮಿತ್ತ ನಾಮಪಲಕ ಅನಾವರಣ, ಭಾವಚಿತ್ರ ಮೆರವಣಿಗೆ ಹಾಗೂ ರಾಜಕೀಯ ಜಾಗ್ರತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮಂಜುನಾಥ ಗಾಂಧಿನಗರ ತಿಳಿಸಿದ್ದಾರೆ.  ಈ ಕುರಿತು ಶನಿವಾರ ಹೇಳಿಕೆ ನೀಡಿ, ಸಾನ್ನಿಧ್ಯವನ್ನು ರವುಡಕುಂದಾದ ಡಾ. ಸಿದ್ದರಾಮಯ್ಯ ಸ್ವಾಮೀಜಿ ವಹಿಸುವರು. ದಲಿತ ಕವಿ ಸಿ.ದಾನಪ್ಪ ನಿಲೋಗಲ್ ಉದ್ಘಾಟಿಸುವರು. ಫಕೀರಪ್ಪ ಎಂ. ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಸುದ್ದಿ ಚಿಂತನ ಪತ್ರಿಕೆಯ ಸಂಪಾದಕ ಸಿ.ಎಚ್. ನಾರಿನಾಳ, ಬಸವ ಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೆ.ನಾಗರಾಜ, ಡಿವೈಎಸ್ಪಿ ಎ.ಎಚ್.ಚಿಪ್ಪಾರ, ಸುದ್ದಿಬಿಂಬ ಸಂಪಾದಕ ಡಿ.ಎಚ್. ಕಂಬಳಿ, ಪಿಡಿಒ ನಿಂಗಪ್ಪ, ವೀರಭದ್ರಪ್ಪ ಮಲ್ಲಾಪುರ, ಕೆಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಎನ್. ಬಡಿಗೇರ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಸೇನಪ್ಪ ಅಮರಾಪುರ, ಎಂ.ಬಿ. ಮರಿಯಪ್ಪ ವಕೀಲರು, ಶರಣಪ್ಪ, ದುರುಗೇಶ ಬಾಲಿ, ಉಪನ್ಯಾಸಕ ಶಂಕರ ಗುರಿಕಾರ, ಆರ್.ಆಂಬ್ರೂಸ್, ಚೌರಪ್ಪ ಜವಳಗೇರಾ, ನಾರಾಯಣ ಬೆಳಗುರ್ಕಿ, ಜಿ.ಅಮರೇಶ, ಬಸವರಾಜ ಹಳ್ಳಿ ಇನ್ನಿತರರು ಭಾಗವಹಿಸುವರು. ನಾಗರಾಜ ತುರ್ವಿಹಾಳ, ಶಿವಪುತ್ರ ತುರ್ವಿಹಾಳ ಹಾಗೂ ಗೊರೇಬಾಳ ತಂಡ ಹೋರಾಟದ ಹಾಡುಗಳನ್ನು ಹಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.