ರಾಯಚೂರು

ಬಸಮ್ಮರಿಗೆ ಅನ್ಸಾರಿ ಪ್ರಶಸ್ತಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.20
ಅಂತಾರಾಷ್ಟ್ರೀಯ ಕುಷ್ಠ ನಿವಾರಣ ಸಂಸ್ಥೆ ವತಿಯಿಂದ ಕುಷ್ಠರೋಗಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ ಗುಲ್ಬರ್ಗದ ಬಸಮ್ಮ ಹಣಮಂತ ದೇವನೂರ ಅವರಿಗೆ ಪುಣೆಯಲ್ಲಿ ಭಾರತದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
  ಬಸಮ್ಮ ಅವರು ಸುಮಾರು 25 ಕುಷ್ಠರೋಗದಿಂದ ಗುಣ ಹೊಂದಿದ ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ಹೊಲಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ತನ್ನ ಅನುಭವದಿಂದ ಒಟ್ಟು 32 ಜನ ಗರ್ಭಿಣಿಯರು ಹೆರಿಗೆಯನ್ನು ಬಡಾವಣೆಯ ಸಮುದಾಯ ಭವನದಲ್ಲಿ ಮಾಡಿಸಿದ್ದಾರೆ.
  ಡಾ. ಅಂಬೇಡ್ಕರ್ ಹೆಸರಿನಿಂದ ಬಡಾವಣೆಯ ಮಹಿಳೆಯರ ಸ್ತ್ರೀ ಶಕ್ತಿ ಗುಂಪು ಮಾಡಿ, ಬಡಾವಣೆಯ ಮಹಿಳೆಯರಿಗೆ ಸಾಲ ಒದಗಿಸಿ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ ಮಾಡಲು ಅನುಕೂಲ ಮಾಡಿದ್ದಾರೆ. ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
  ಅಂತಾರಾಷ್ಟ್ರೀಯ ಕುಷ್ಠ ನಿವಾರಣ ಸಂಸ್ಥೆ ಅಧ್ಯಕ್ಷ ರಾಮ ನಾಯಕ ಹಾಗೂ ಮಾಜಿ ಪೆಟ್ರೋಲಿಂಯಂ ಸಚಿವರು ಬಸಮ್ಮ ಎಚ್. ದೇವನೂರರಿಗೆ ಸನ್ಮಾನ ಪತ್ರಿ ನೀಡಿ ಅವರ ಕಾರ್ಯಗಳನ್ನು ಶ್ಲಾಘಿಸಿದರು. ಈ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣ ಉಪಸ್ಥಿತರಿದ್ದರು ಎಂದು ರಾಷ್ಟ್ರೀಯ ಪುರಸ್ಕಾರ ವಿಜೇತ ಹಾಗೂ ಪ್ರಧಾನ ಕಾರ್ಯದರ್ಶಿ ಹಣಮಂತ ಎಚ್. ದೇವನೂರ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.