ರಾಯಚೂರು

ಮನಗಳಿಗೆ ವಿಶಿಷ್ಟ ಚೇತನ ತುಂಬಿದ್ದು ದಾಸರು: ಮಲ್ಹಾರರಾವ್

Published On :

ಕ.ಪ್ರ.ವಾರ್ತೆ, ಗುಲ್ಬರ್ಗ, ಏ.20
ತಮ್ಮ ಸರಳ ನುಡಿ ಹಾಗೂ ಉನ್ನತ ಚಿಂತನೆಗಳಿರುವಂತಹ ಪದಗಳು, ಸುಳಾದಿಗಳು, ಕೀರ್ತನಗಳ ಮುಖಾತಂರ ದಾಸರು ದೇಶಿವೈದ್ಯ ಹಾಗೂ ಸಂಗೀತ, ಅದರ ಸಿಹಿಫಲಗಳ ಸಂದೇಶವನ್ನು ಮನೆಮನೆಗೂ ಬಲು ಸಮರ್ಥವಾಗಿ ಸಾರಿದರು ಎಂದು ಖ್ಯಾತ ವೈದ್ಯ, ಚಿಂತಕ ಡಾ. ಮಲ್ಹಾರರಾವ್ ಮಲ್ಲೆ ಹೇಳಿದ್ದಾರೆ.
  ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿರುವ ಪುರಂದರದಾಸರ ಅಧ್ಯಯನ ಪೀಠವು ಜಿಲ್ಲಾ ಕಸಾಪ ಸಹಯೋಗದೊಂದಿಗೆ ಆಯೋಜಿಸಿದ್ದ ದಾಸ ಸಾಹಿತ್ಯ- ಸಮಕಾಲೀನ ಚಿಂತನೆ(ಯಾಜ್ಞವಲ್ಕ್ಯ ಭವನ) ರಾಜ್ಯ ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಡಾ. ಮಲ್ಲೆ ಅನೇಕ ಹೊಸ ವಿಷಯಗಳನ್ನು ಮಂಡಿಸುವ ಪ್ರಯತ್ನ ಮಾಡಿದರು.
ದಾಸರು ನಿಜವಾಗ್ಯೂ ಸಂಗೀತ ಸಾರ್ವಭೌಮರು: ದಾಸ ಸಾಹಿತ್ಯದಲ್ಲಿ ದೇಶಿವೈದ್ಯ ಪದ್ಧತಿ ಸಂದೇಶ ಹಾಗೂ ಸಂಗೀತ ವಿಷಯವಾಗಿ ಸುದೀರ್ಘವಾಗಿ ಮಾತನಾಡಿ, ಪ್ರಾಯೋಗಿಕವಾಗಿಯೂ ಈ ಸಂಗತಿಗಳ ಬಗ್ಗೆ ಸಿಭಿಕರಿಗೆ ಅನೇಕ ವಿಷಯಗಳನ್ನು ಹೇಳಿಕೊಟ್ಟರು. ತಂತಿ, ಚರ್ಮ, ಗಾಳಿ, ಘನವಾದ್ಯ ಪ್ರಕಾರಗಳನ್ನೆಲ್ಲ ಏಕಕಾಲಕ್ಕೆ ಬಳಸುವ ಮೂಲಕ ದಾಸರು ತಮ್ಮ ಪದಗಳಿಗೆ ವಿಶಿಷ್ಟ ಚೇತನ ತುಂಬುವ ಯತ್ನ ಮಾಡಿದವರು. ಇಂತಹ ಸಂಗೀತ ಸಾರ್ವಭೌಮರು ದಾಸರ ಹೊರತು ಬೇರಾರೂ ಇಲ್ಲ ಎಂದು ಹೇಳಿದರಲ್ಲದೆ ವೈಜ್ಞಾನಿಕವಾಗಿಯೂ ದಾಸರ ಪದಗಳು- ಸುಳಾದಿಗಳಿಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಆರೋಗ್ಯ ಸಂದೇಶ ಅರ್ಥಪೂರ್ಣ: ರಾಗಿ ಮಹತ್ವ ಸಾರುವ “ÁÛW ತನ್ನಿರೋ ಭಿಕ್ಷಕೆ ರಾಗಿ }Ú¬­ÁæàÞ...’ ಎಂಬ ದಾಸರ ಪದ ಸೋದಾಹರಣವಾಗಿ ವಿವರಿಸುತ್ತ ರಾಗಿಯಲ್ಲಿನ ಗಟ್ಟತನವನ್ನು ದೇವರ ಹಿನ್ನೆಲೆಯಾಗಿ, ದಾನದ ಹಿನ್ನೆಲೆಯಾಗಿ ದಾಸರು ವರ್ಣಿಸಿದ ಪರಿ ಅನನ್ಯ ಎಂದರು.
  ದೇಶಿ ಔಷಧ ತತ್ವ ಮೂಲ ಗುರಿ: ಬಾಳೆಹಣ್ಣು, ಮಾವಿನ ಹಣ್ಣುಗಳ ಮಹತ್ವ ಸಾರಿದ್ದು, ಸ್ಥೂಲಕಾಯರಾದವರಿಗೆ ಉಪವಾಸದ ಸಲಹೆ ಏಕಾದಶಿ ಹಾಡಿನ ಮಹತ್ವದ ಮೂಲಕ ತಿಳಿ ಹೇಳಿದ್ದು ದಾಸರು. ವೃತಾಚರಣೆಯಲ್ಲಾದರೂ ವೈಜ್ಞಾನಿಕವಾಗಿ ನಿಯಮಗಳ ಪಾಲನೆಯಾಗಲಿ ಎಂಬುದೇ ದಾಸರ ಪದಗಳಲ್ಲಿನ ದೇಶಿಔಷಧಿ ತತ್ವಗಳ ಮೂಲ ಗುರಿಯಾಗಿರಬೇಕೆಂದು ಡಾ. ಮಲ್ಲೆ ತಮ್ಮ ಮಾತುಗಳಲ್ಲಿ ಅನೇಕ ಹೊಸ ಸಂಗತಿಗಳನ್ನು ಹೊರಹಾಕಿದರು.
  ದಾಸ ಸಾಹಿತ್ಯ ಪರಿಣಿತರಾದ ಡಾ. ಸ್ವಾಮೀರಾವ ಕುಲ್ಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ಬೆಂಗಳೂರಿನಿಂದ ಆಗಮಿಸಿದ್ದ ದಾಸ ಸಾಹಿತ್ಯ ವಿಸಾರದರು, ಹಂಪಿ ಕನ್ನಡ ವಿವಿ ವಿಷಯ ಪರಿಣಿತರು, ಸ್ಥಳೀಯ ಭಜನಾ ಮಂಡಳಿಗಳ ಸದಸ್ಯರು ಎಲ್ಲರೂ ಇದ್ದರು. ವಿದ್ವಾಂಸರು ಹೊಸತನದ ಚಿಂತನೆಗೆ ನಾಂದಿ ಹೇಳುವ ಯತ್ನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.