ಬೀದಿ ನಾಟಕದ ಮೂಲಕ ಜಾಗೃತಿ
ಮುದಗಲ್: ಭಾರತ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ, ರಾಜ್ಯ ಸರಕಾರ, ಜಿಲ್ಲ ಮತ್ತು ತಾಲೂಕು ಆಡಳಿತ ಜಂಟಿಯಾಗಿ ಆಯೋಜಿಸಿರುವ ಮತದಾನ ಹಕ್ಕು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಕುರಿತು ಅಭಿಯಾನ ತಂಡದ ನೋಡಲ್ ಅಧಿಕಾರಿ ಸಿಡಿಪಿಓ ಪ್ರಭಾಕರ ಪತ್ರಕರ್ತರಿಗೆ ಮಾಹಿತಿ ನೀಡುತ್ತ ಚುನಾವಣಾ ಆಯೋಗದ ಕಾರ್ಯಕ್ರಮ ಇದಾಗಿದ್ದು ಹೋಬಳಿ ಪ್ರದೇಶದಲ್ಲಿ ಈ ತಂಡದೊಂದಿಗೆ ಬೀದಿ ನಾಟಕದ ಮೂಲಕ ಜನರನ್ನು ಜಾಗೃತಿ ಮಾಡಲಾಗುವದು. ಬೀದಿ ನಾಟಕದ ಮೂಲಕ ಪ್ರತಿಯೊಬ್ಬ 18 ವರ್ಷ ಮೇಲ್ಪಟ್ಟ ನಾಗರಿಕನ ಮತದಾನದ ಹಕ್ಕು, ವೈಯಕ್ತಿಕ ಹಕ್ಕು, ಹಕ್ಕನ್ನು ಕಳೆದುಕೊಂಡು ಬಾರದೆನ್ನುವಂತೆ ಮತ ಚಲಾಯಿಸಲು ಸಂದೇಶವನ್ನು ರವಾನಿಸಲಾಗುತ್ತದೆ.
ಶ್ರುತಿ ಸಂಸ್ಕೃತಿ ಕಲಾ ತಂಡ ಆಶಾಪೂರ ಅವರಿಂದ ಈ ಅಭಿಯಾನವನ್ನು ನಡೆಸಲಾಗುತ್ತಿದ್ದು, ನಾಗರಿಕರಲ್ಲಿ ಉತ್ತಮವಾದ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ತಂಡದಲ್ಲಿ ಭೀಮರಾಯ ಭಂಡಾರಿ, ನರೇಶ ಡಿಂಗ್ರಿ, ಈರಮ್ಮ, ಗೌರಮ್ಮ, ಅಶೋಕ ಸೇರಿದಂತೆ ಮುಂತಾದವರು ಹಾಡುತ್ತ, ಕುಣಿಯುತ್ತ ನಾಟಕದ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಸಗಮಕುಂಟಾದಲ್ಲಿ...
ರಾಯಚೂರು: ತಾಲೂಕಿನ ಸಗಮಕುಂಟಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಮತದಾನದ ಕುರಿತು ಯುನಿಸೆಫ್ ವತಿಯಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಮತ್ತು ಪುರುಷ ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಸಮರ್ಪಕ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಶಾಂಭವಿ, ಗಾಯತ್ರಿ, ಜಯಶ್ರೀ, ಯುನಿಸೆಫ್ ಸ್ವಯಂ ಸೇವಕ ಮೈಲಾರಿ ಮತ್ತಿತರರಿದ್ದರು.
ಮುದಗಲ್; 44 ಬಾಕ್ಸ್ ಅಕ್ರಮ ಮದ್ಯ ವಶ
ಮುದಗಲ್: ಕಡದರಾಳ ಸಿವಾರದಲ್ಲಿ ಬರುವ ಜಮಿನೋಂದರಲ್ಲಿ ಅಕ್ರಮ ಮದ್ಯ ಬಚ್ಚಿಟ್ಟಿದ್ದನ್ನು ಸ್ಥಳೀಯ ಪೊಲೀಸರು, ಅಬಕಾರಿ ಅಧಿಕಾರಿಗಳು ಮತ್ತು ಫ್ಲೈಯಿಂಗ್ ಸ್ಕ್ವಾಡ್ ಸೇರಿ 44 ಬಾಕ್ಸ್ ಮದ್ಯದ ಬಾಟಲಿನಗಳನ್ನು ವಶ ಪಡಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಮದ್ಯದ ಬಾಟಲಿಗಳನ್ನು ಹಂಚಿಕೆ ಮಾಡುವ ಸಲುವಾಗಿ ಸತ್ಯಪ್ಪ ವಡ್ಡರ್ ಎನ್ನುವವರ ಜಮೀನಲ್ಲಿ ಸುಮಾರು 93 ಸಾವಿರ ರು. ಬೆಲೆಯ 44 ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಬಸವರಾಜ ಬೀಸನಕೊಪ್ಪ ತಿಳಿಸಿದ್ದಾರೆ.
ಸ್ಕ್ವಾಡ್‌ನಲ್ಲಿ ರಾಜೇಂದ್ರಕುಮಾರ, ಸಂದೀಪ, ಅಬಕಾರಿ ಪಿಎಸ್‌ಐ ಗುರುಪಾದಪ್ಪ, ಪಿ.ಎಸ್.ಐ ಬಸವರಾಜ ಬಿಸನಕೊಪ್ಪ, ಪೊಲೀಸ್ ಪೇದೆಗಳು ದಾಳಿ ನಡೆಸಿದ್ದಾರೆ.
ಅಕ್ರಮ ಮದ್ಯವನ್ನು ತನ್ನ ಜಮೀನಲ್ಲಿ ಬಚ್ಚಿಟ್ಟಿದ್ದ ಜಮೀನು ಮಾಲಿಕ ಸತ್ಯಪ್ಪ ವಡ್ಡರನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸತ್ಯಪ್ಪ ತಲೆಮರೆಸಿಕೊಂಡಿದ್ದಾನೆನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

