ರಾಯಚೂರು

ನಾಳೆ ಮಹಿಳಾ ಮತದಾರರ ಜಾಗೃತಿ ಅಭಿಯಾನ

Published On :

ಗುಲ್ಬರ್ಗ: ಮತದಾನ ಪ್ರಮಾಣ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಹಾಗೂ ನೈತಿಕ ಮತದಾನ ಮಾಡುವ ಬಗ್ಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಮಹಿಳಾ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಗರದಲ್ಲಿ ಏ.24ರಂದು ಹಮ್ಮಿಕೊಳ್ಳಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಏ.24ರಂದು ಬೆಳಗಿನ 9ಕ್ಕೆ ನಗರದ ನಗರೇಶ್ವರ ಶಾಲೆಯಿಂದ, ಶರಣಬಸವೇಶ್ವರ ದೇವಾಲಯ ಆವರಣದಿಂದ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ ಮತ್ತು ಜಗತ್ ವೃತ್ತದಿಂದ ಪ್ರಾರಂಭವಾಗುವ ಮಹಿಳೆಯರ ಮೆರವಣಿಗೆ ಜಾಥಾಗಳು 11ಕ್ಕೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೇರುವವು.

ಜಿಲ್ಲೆಯಲ್ಲಿ 2037 ಮತಗಟ್ಟೆಗಳು

ಗುಲ್ಬರ್ಗ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆ ಮತದಾನ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಜಿಲ್ಲೆಯಲ್ಲಿ ಉದ್ದೇಶಿತ 70 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ 2037 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.
ಮತಗಟ್ಟೆಗಳ ವಿವರ ಇಂತಿದ್ದು, ಆವರಣದಲ್ಲಿ ಆಕ್ಸಿಲರಿ ಮತಗಟ್ಟೆಗಳ ಸಂಖ್ಯೆಯನ್ನು ತೋರಿಸಿದೆ. ಅಫಜಲ್ಪುರ- 231(8), ಜೇವರ್ಗಿ- 239(7), ಚಿತ್ತಾಪುರ(ಎಸ್‌ಸಿ)- 217(7), ಸೇಡಂ- 222(4), ಚಿಂಚೋಳಿ(ಎಸ್‌ಸಿ)- 224(2), ಗುಲ್ಬರ್ಗ ಗ್ರಾಮೀಣ(ಎಸ್‌ಸಿ)- 265(2), ಗುಲ್ಬರ್ಗ ದಕ್ಷಿಣ- 209(11), ಗುಲ್ಬರ್ಗ ಉತ್ತರ- 201(16) ಮತ್ತು ಆಳಂದ- 229(13).




ಇಂದು ಪ್ಯಾರಾ ಗ್ಲೈಡಿಂಗ್
ಗುಲ್ಬರ್ಗ: ಮತದಾರರ ಹಕ್ಕನ್ನು ಚಲಾಯಿಸುವ ಜಾಗೃತಿ ಆಂದೋಲನದ ಅಂಗವಾಗಿ ಗುಲ್ಬರ್ಗ ತಾಲೂಕಿನ ಶ್ರೀನಿವಾಸ ಸರಡಗಿ ವಿಮಾನ ತಂಗುದಾಣದಿಂದ ಮತದಾರರಲ್ಲಿ ಅರಿವು ಮೂಡಿಸಲು ಪ್ಯಾರಾ ಗ್ಲೈಡಿಂಗ್ ಕಾರ್ಯಕ್ರಮವನ್ನು ಏ.23 ಬೆಳಗ್ಗೆ 7ಕ್ಕೆ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಉದ್ಘಾಟಿಸುವರು. ಪ್ಯಾರಾ ಗ್ಲೈಡಿಂಗ್ ತಂಡದ ಮುಖ್ಯಸ್ಥ ನಿಕೊಲಾಸ್ ಸಿಂಗ್ ನೇತೃತ್ವದ ಈ ತಂಡದಲ್ಲಿ 6 ಸಿಬ್ಬಂದಿ ಮತ್ತು 2 ಚಾಲಕರಿರುವರು. ಪ್ಯಾರಾಗ್ಲೈಡರ್ ಮೂಲಕ ಗುಲ್ಬರ್ಗ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಆಗಸದಲ್ಲಿ ಸಂಚರಿಸಿ ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಇದಾಗಿದೆ. ಮೇ 5ರಂದು ತಪ್ಪದೇ ಮತದಾನ ಮಾಡುವ ಹಾಗೂ ಮತದಾದ ಪ್ರತಿಜ್ಞಾ ವಿಧಿಯ ಕರಪತ್ರಗಳನ್ನು ಪ್ಯಾರಾ ಗ್ಲೈಡರ್ ಮೂಲಕ ಹಾರಿಬಿಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.