ಸಿಡಿಲು ಬಡಿದು ಬಾಲಕ ಸಾವು
ಯಾದಗಿರಿ: ತಾಲೂಕಿನ ದೊಡ್ಡಸಂಬ್ರ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ಗೋಪಾಲ ನಿಂಗಾರೆಡ್ಡಿ ಪೋಲಂಪಲ್ಲಿ (10) ಮೃತ ಬಾಲಕ. ಕ್ರಿಕೆಟ್ ಆಡುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಈತ ಮೃತಪಟ್ಟಿದ್ದಾನೆ. ಈತನ ಜೊತೆಯಿದ್ದ ಸುನೀಲ ಹಾಗೂ ಬನ್ನಪ್ಪ ಎಂಬ ಬಾಲಕರಿಗ ಗಾಯವಾಗಿದೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿ.ನಾ.ಹಳ್ಳಿ: ಡೆಂಘೀಗೆ ಬಾಲಕಿ ಬಲಿ
ಚಿಕ್ಕನಾಯಕನಹಳ್ಳಿ: ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಾಲಕಿಯೋರ್ವಳು ಡೆಂಘೀ ಜ್ವರಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಬಡಾವಣೆಯ ರಮೇಶ್ ಎಂಬುವರ ಮಗಳಾದ ಚಿನ್ಮಣಿ (9) ಎಂಬ ಬಾಲಕಿ ಡೆಂಘೀ ಜ್ವರಕ್ಕೆ ತುತ್ತಾಗಿದ್ದಾಳೆ. ಇತ್ತೀಚೆಗೆ ಅನೈರ್ಮಲ್ಯ ಹೆಚ್ಚಿದ್ದು, ಕಾಯಿಲೆಗಳು ಸಾಮಾನ್ಯವಾಗಿದೆ. ಈಗಲಾದರು ಪುರಸಭೆ ಎಚ್ಚೆತ್ತು ಪಟ್ಟದಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಂದಿನಿಂದ 5ನೇ
ಮಹಾಸಮಾರಾಧನೆ
ರಾಯಚೂರು: ಮಂತ್ರಾಲಯದಲ್ಲಿ ಪೂರ್ವ ಪೀಠಾಧಿಪತಿಗಳಾದ ಶ್ರೀಸುಶಮೀಂದ್ರ ತೀರ್ಥರ 5ನೇ ಮಹಾಸಮಾರಾಧನೆ ಕಾರ್ಯಕ್ರಮ ಏ. 24ರಿಂದ 28ರ ವರೆಗೆ ಆಯೋಜಿಸಲಾಗಿದೆ. ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶ್ರೀಸುಶಮೀ ರಾಘವೇಂದ್ರ ಪ್ರಶಸ್ತಿಯನ್ನು ವಿದ್ವಾನ್ ರಾಜಸ್ಥಾನದ ಜೈಪುರ ವಿವಿಯ ಡಾ. ವೆಂಕಟರಮಣ ಆಚಾರ್ಯ ಮತ್ತು ಟಿಟಿಡಿ ಮಾಜಿ ಕಾರ್ಯ ನಿರ್ವಾಹಕಾಧಿಕಾರಿ ಪಿ.ವಿ.ಆರ್.ಕೆ. ಪ್ರಸಾದ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಶ್ರೀಸುಶಮೀಂದ್ರ ಪುರಸ್ಕಾರವನ್ನು ದ್ವೈತ ಸಿದ್ಧಾಂತ ಕ್ಷೇತ್ರದಲ್ಲಿನ ಸಾಧನೆಗೆ ಗುಂಜಳ್ಳಿ ವಾಸುದೇವಾಚಾರ್ಯ, ವಿದ್ವಾನ್ ಬಿ.ಎನ್. ಸೀತಾರಾಮಾಚಾರ್ಯ, ಡಾ. ಮಾದನೂರು ನಾರಾಯಣಾಚಾರ್ಯ, ವಿದ್ವಾನ್ ಬಿಂದಾಚಾರ್ಯ ನಾಗಸಂಪಿಗೆ ಅವರಿಗೆ ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

