ಇಂದು ಮತದಾನ ಜಾಗೃತಿ ಬೀದಿನಾಟಕ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.22
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಪ್ರಮಾಣ ಗರಿಷ್ಟ ಮಟ್ಟದಲ್ಲಿ ಹೆಚ್ಚಿಸಲು ಹಾಗೂ ಮತದಾರರಲ್ಲಿ ಮತದಾನ ಹಕ್ಕಿನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಗುಲ್ಬರ್ಗ ಜಿಲ್ಲೆಯ ಆಯ್ದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮೇ 1ರವರೆಗೆ ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದಕ್ಕಾಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ಜರುಗಿದ ಚುನಾವಣೆಯಲ್ಲಿ ಶೇ. 40ಕ್ಕಿಂತಲೂ ಕಡಿಮೆ ಪ್ರತಿಶತ ಮತದಾನವಾದ ಹಾಗೂ ಉದ್ಯೋಗ ಅರಸಿ ವಲಸೆ ಹೋಗುವ ಪ್ರದೇಶಗಳನ್ನು ಗುರುತಿಸಿ ಮತದಾರರು ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಪ್ರಭುಲಿಂಗ ಕಿಣಗಿ, ಶಾಂತಯ್ಯ ಮಠಪತಿ ಮತ್ತು ರೇಣುಕಾ ನೇತೃತ್ವದ ತಂಡಗಳು ಪ್ರತಿದಿನ ಮೂರು ಗ್ರಾಮನಗರ ಪ್ರದೇಶಗಳಲ್ಲಿ ಬೆಳಗಿನ 9ಕ್ಕೆ, ಮಧ್ಯಾಹ್ನ 3ಕ್ಕೆ ಹಾಗೂ ಸಂಜೆ 6ಕ್ಕೆ ಕಾರ್ಯಕ್ರಮ ನೀಡಲಿವೆ.
ಏ.23 ರಂದು ಬೀದಿ ನಾಟಕ ಪ್ರದರ್ಶಿಸುವ ವಿವರ ಇಂತಿದೆ.
ಪ್ರಭುಲಿಂಗ ಕಿಣಗಿ ತಂಡ- ಗುಲ್ಬರ್ಗ ಗ್ರಾಮೀಣ (ಎಸ್ಸಿ) ಮತಕ್ಷೇತ್ರ ಜೀವಣಗಿ, ಬೇಲೂರ ಕೆ, ನಾಮುನಾಯಕ ತಾಂಡಾ. ಶಾಂತಯ್ಯ ಮಠಪತಿ ತಂಡ- ಚಿತ್ತಾಪುರ ಮತಕ್ಷೇತ್ರ ಭೀಮನಳ್ಳಿ, ಡೋಣಗಾಂವ, ಅಳ್ಳೊಳ್ಳಿ, ರೇಣುಕಾ ತಂಡ -ಚಿಂಚೋಳಿ ಮತಕ್ಷೇತ್ರ ಚಿಮ್ಮನಚೋಡ, ಹೀಮ ಹೊಸಳ್ಳಿ, ದಸ್ತಾಪುರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

