ರಾಯಚೂರು

ಸಿದ್ದು ಸಿಎಂ ಆಗಲು ಕಾಂಗ್ರೆಸ್ ಬೆಂಬಲಿಸಲು ಗುರುವಿನ್ ಮನವಿ

Published On :

ದೇವದುರ್ಗ: ರಾಜ್ಯದ ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಜಿಪಂ ಮಾಜಿ ಸದಸ್ಯ ಹಾಗೂ ಹಾಲುಮತ ಸಮಾಜದ ಜಿಲ್ಲಾ ಮುಖಂಡ ಸಿದ್ದಯ್ಯ ತಾತಾ ಗುರುವಿನ್ ಮನವಿ ಮಾಡಿದರು.
ಅವರು ಕೊಪ್ಪರ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅನುದಾನದ ಲೂಟಿ ಮಾಡಲಾಗಿದೆ. ಕ್ಷೇತ್ರದ ಶಾಸಕ ಶಿವನಗೌಡ ನಾಯಕ ತಾಲೂಕಿನ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಒದಗಿಸಿದ ಸಾವಿರಾರು ಕೋಟಿ ರು. ದುರ್ಬಳಕೆ ಮಾಡಿಕೊಂಡಿದ್ದಾರೆಂದು ಟೀಕಿಸಿದರು.
ಅಕ್ರಮ ತಡೆಗೆ ಕಾಂಗ್ರೆಸ್ ಅಭ್ಯರ್ಥಿ ಎ. ವೆಂಕಟೇಶ ನಾಯಕ ಅವರಿಗೆ ಬೆಂಬಲಿಸಲು ಮನವಿ ಮಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಸರಳ, ಸಜ್ಜನ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಒಳ್ಳೆಯ ವ್ಯಕ್ತಿಯನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಪ್ರಗತಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಸಿದ್ದಯ್ಯ ಗುರುವಿನ್ ನೇತೃತ್ವದಲ್ಲಿ ಕೊಪ್ಪರ ಜಿಪಂ ವ್ಯಾಪ್ತಿಯ ಹಾಲುಮತ ಸಮಾಜ ಮುಖಂಡರಾದ ಬಸನಗೌಡ ಹಾಲಪ್ಪನವರ, ದೊಡ್ಡನಿಂಗಪ್ಪ ಕುರುಬರ, ಸಣ್ಣನಿಂಗಪ್ಪ ಕುರುಬರ, ಗ್ರಾಪಂ ಸದಸ್ಯರಾದ ಮೌನೇಶ, ಭೀರಪ್ಪ ಗ್ವಾಡಿಯಾಳ, ಸಿದ್ದಪ್ಪ ಕಲ್ಮನಿ, ಕಾಶಿರಾಯ ಅಬಕಾರಿ, ನರಸಪ್ಪ ಚಲವಾದಿ, ಶಿವಪ್ಪಗೌಡ ಮೀರಾಪುರ ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.
ಸಭೆಯಲ್ಲಿ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಯುವ ಮುಖಂಡ ಬಿ.ವಿ. ನಾಯಕ, ಬುಡ್ಡನಗೌಡ ಜಾಗಟಗಲ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಲಿಂಗಣ್ಣಗೌಡ ಬುಳ್ಳಾ, ಶಿವರಾಜ, ಖಂಡಪ್ಪ ಕಲ್ಮನಿ, ಕೋರಿ ಶೇಖರಪ್ಪ ಸಾಹು, ಕೊಪ್ಪರ ಗ್ರಾಪಂ ಮಾಜಿ ಅಧ್ಯಕ್ಷ ಸುಲ್ತಾನ ಬಾಬು, ಗುರುನಾಥ ರೆಡ್ಡಿ ಬುಳ್ಳಾ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.