ರಾಯಚೂರು

ಡಾ. ರಾಜ್ ಜಯಂತಿ ಆಚರಣೆ

Published On :

ರಾಯಚೂರು: ನಗರದ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಇತ್ತೀಚೆಗೆ ಅಖಿಲ ಕರ್ನಾಟಕ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದಿಂದ ಡಾ. ರಾಜ್ಕುಮಾರ್ ಅವರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಘದ ಗೌರವ ಕಾರ್ಯದರ್ಶಿ ಜೆ.ಎಲ್. ಗೋಪಿ ಮಾತನಾಡಿದರು. ಶರಣಪ್ಪ ಗೋನಾಳ್ ಮತ್ತು ಅಂಧ ಮಕ್ಕಳ ಶಾಲೆಯ ಪ್ರಾಚಾರ್ಯ ಕುಪೇಂದ್ರ, ನೀಲಕಂಠ, ಕೆ. ವೀರೇಶ್ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎನ್.ಎಂ. ಮೈತ್ರಿಕರ್, ಉಪಾಧ್ಯಕ್ಷರಾದ ಎಂ. ನಂಜುಂಡ, ಬಸವರಾಜ್ ಮಿಮಿಕ್ರಿ, ಮಲ್ಲೇಶ ಗಧಾರ್, ನಾಗರಾಜ್ ಸೇರಿದಂತೆ ಸಂಘದ ಅನೇಕ ಸದಸ್ಯರಿದ್ದರು.
ವಿಚಾರಗೋಷ್ಠಿಗೆ ಶಕುಂತಲಾ ಆಯ್ಕೆ
ರಾಯಚೂರು: ನೃಪತುಂಗ ಕಲಾನಿಕೇತನ ಹಾಗೂ ಅಂಡಮಾನ್ನ ಕನ್ನಡ ಸಂಘದಿಂದ ಮೇ 19ರಂದು ಅಂಡಮಾನ್ನ ಪೋರ್ಟ್ ಬ್ಲೇರ್ನಲ್ಲಿ ಆಯೋಜಿಸಿರುವ ವಿಚಾರಗೋಷ್ಠಿಯಲ್ಲಿ ನಗರದ ಎಸ್ಎಸ್ಆರ್ಜಿ ಮಹಿಳಾ ಮಹಾವಿದ್ಯಾಲಯದ ಡಾ. ಶಕುಂತಲಾ ಶೆಟ್ಟಿ ಅವರಿಗೆ ಪಾಲ್ಗೊಳ್ಳುವ ಅವಕಾಶ ದೊರೆತಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯ ಅಧ್ಯಕ್ಷ ಮಾರುತಿ ಬಡಿಗೇರ್, ಸಾಗರಾದಾಚೆ ಸಾಹಿತ್ಯ-ಸಂಸ್ಕೃತಿ ಸಿಂಚನ ಕಾರ್ಯಕ್ರಮದಡಿ ಆಯೋಜಿಸಿರುವ ವಿಚಾರಗೋಷ್ಠಿಯಲ್ಲಿ ಡಾ. ಶಕುಂತಲಾ ಶೆಟ್ಟಿ 'ಮಹಿಳೆಯರು ಎಷ್ಟು ಸುರಕ್ಷಿತ' ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆಂದು ತಿಳಿಸಿದ್ದಾರೆ.



ಅನೈತಿಕ ಸಂಬಂಧ ಶಂಕೆ; ಕೊಲೆ


ರಾಯಚೂರು: ತಾಲೂಕಿನ ಸಗಮಕುಂಟಾ ಗ್ರಾಮದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರಲಾಗಿದೆ. ಕೊಲೆಯಾದವನನ್ನು ಗ್ರಾಮದ ಸುರೇಶ್ ಎಂದು ಗುರುತಿಸಲಾಗಿದೆ. ಈತ ಅದೇ ಗ್ರಾಮದ ಮಹಿಳೆಯೊಬ್ಬಾಕೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಹನುಮಂತ ಮತ್ತಿತರೆ 6 ಜನರು ಸುರೇಶ್ನನ್ನು ರಾಯಚೂರಿಗೆ ಕರೆದೊಯ್ದು ವಿಷ ತಿನಿಸಿ ನಂತರದಲ್ಲಿ ಕೊಲೆ ಮಾಡಿದ್ದಾರೆಂದು ಪೊಲೀಸರಿಗೆ ದೂರಲಾಗಿದೆ. ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.