ರಾಯಚೂರು

ಕಾಂಗ್ರೆಸ್‌ಗೆ ಸೇರ್ಪಡೆ

Published On :

ದೇವದುರ್ಗ: ದೇವದುರ್ಗ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕರನ್ನು ಬೆಂಬಲಿಸಿ  ಅನೇಕ ವಕೀಲರು ಈಚೆಗೆ ಕಾಂಗ್ರೆಸ್ ಸೇರಿದರು. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕ, ತಾಲೂಕಿನಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಸ್ಥಳೀಯ ಶಾಸಕರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆಂದು ಆರೋಪಿಸಿದರು. ಈ ಸಂದರ್ಭದದಲ್ಲಿ ವಕೀಲರಾದ ಶಿವಾನಂದ ಮೇಟಿ, ಎಂ. ಮೌನೇಶ್ವರ, ಮಹಾದೇವಪ್ಪ ಎನ್. ಕೆ. ಹನುಮಂತ್ರಾಯ ಕೋಳೂರ, ಬಿ.ಆರ್. ಮನ್ನಾಪುರಿ, ಗುರುರಾಜ ಪಾಟೀಲ್, ರವಿಕುಮಾರ ಚಿಂಚೋಡಿ, ದೇವಿಂದ್ರಪ್ಪ ಬೇರಿ, ಚೆನ್ನಪ್ಪ ಗೆಜ್ಜೆಭಾವಿ, ಶಿವನಗೌಡ ಗೌರಂಪೇಟ, ಬಸವರಾಜ ಬೊಮ್ಮನಹಳ್ಳಿ, ಬಸವರಾಜ ಭವಾನಿ, ತಾಯಪ್ಪ ನಾಯಕ, ಮರಿಲಿಂಗಪ್ಪ ಕೋಳೂರು ಸೇರಿ ಅನೇಕರು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಈ ವೇಳೆ ಪಕ್ಷದ ಮುಖಂಡರಾದ ಮಹ್ಮದ ಯಕ್ಬಾಲ್ ಸಾಬ್ ಹೌದುಡಿ, ಅಮರೇಗೌಡ ಬೇರಗಿ, ವೇಣುಗೋಪಾಲ, ಮಹ್ಮದ ಫಾರುಖ್, ಮುಕ್ಕಣ್ಣ ಎಸ್ ಸೇರಿದಂತೆ ಅನೇಕರಿದ್ದರು.
'ಕೈ' ಕೊಟ್ಟು ತೆನೆ ಹೊತ್ತವರು...
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ 13 ನೇ ವಾರ್ಡಿನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಗುರುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಾಜಿ ಶಾಸಕ ಮಾನಪ್ಪ ವಜ್ಜಲ್, ಪಕ್ಷದ ತಾಲೂಕು ಅಧ್ಯಕ್ಷ ಶಿವಾನಂದ ಐದನಾಳ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್ ಇವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ತೊರೆದ ರುಸ್ತುಮ್ ಖುರೇಶಿ, ಫಾರುಕ್ ಅಬ್ದುಲ್, ಶಬ್ಬೀರ ಹುಸೇನ, ಇಬ್ರಾಹಿಂಖಾನ್, ಬಾಬಾಸಾಬ, ಗುಲಾಮನಬಿ, ಮಹ್ಮದ್ ಇತರರು ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಸಿಇಟಿ: 1744 ನೋಂದಣಿ
ರಾಯಚೂರು: ನಗರದಲ್ಲಿ ಮೇ 1 ಮತ್ತು 2ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ 6 ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಿದ್ದು, ಒಟ್ಟು 1744 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆಂದು ಡಿಡಿಪಿಯು ಕಚೇರಿ ತಿಳಿಸಿದೆ. ಪರೀಕ್ಷೆಯ ಹಿನ್ನೆಲೆಯಲ್ಲಿ ಏ.28 ರಂದು ಪರೀಕ್ಷೆಯ ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ಆಯೋಜಿಸಿದ್ದು ನಗರದ ಡಿಡಿಪಿಯು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಈ ತರಬೇತಿ ನಡೆಯಲಿದ್ದು, ನಿಯೋಜಿತ ಸಿಬ್ಬಂದಿ ಹಾಜರಿರಲು ಕೋರಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.