ರಾಯಚೂರು

ಸಮಸ್ಯೆಗಳಿಗಿಲ್ಲ ಕೊನೆ

Published On :

ಸಿಂಧನೂರು ಕ್ಷೇತ್ರದಲ್ಲಿ ಸಮಸ್ಯೆಗಳಿಗೇನೂ ಬರವಿಲ್ಲ. ಗೊರೇಬಾಳ ಪಿಕ್‌ಅಪ್, ವಳಬಳ್ಳಾರಿ ಪಿಕ್‌ಅಪ್‌ಗಳು ದಶಕಗಳೇ ಉರುಳಿದರೂ ಪೂರ್ಣಗೊಂಡಿಲ್ಲ. ವಳಬಳ್ಳಾರಿಯ ಸುಕ್ಷೇತ್ರ ಸುವರ್ಣಗಿರಿ ವಿರಕ್ತಮಠಕ್ಕೆ ಸಾಗುವ ವಳಬಳ್ಳಾರಿ ರಸ್ತೆ ದುರಸ್ತಿಗೆ ಸುಮಾರು 30 ಕೋಟಿಗೂ ಹೆಚ್ಚು ಹಣ 10 ವರ್ಷಗಳಲ್ಲಿ ಖರ್ಚಾಗಿದೆ. ಆದರೆ ರಸ್ತೆ ಮಾತ್ರ ಬದಲಾಗಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಪೂರೈಕೆ, ಕುಡಿವ ನೀರಿನ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ನಗರದಲ್ಲಿ ಯುಜಿಡಿ ಸ್ಕೀಮ್ ಜಾರಿಯಾಗದಿರುವುದು, ರಂಗಮಂದಿರ ಹಂದಿಗಳ ತಾಣವಾಗಿರುವುದು ನಾಗರಿಕರಲ್ಲಿ ಬೇಸರ ತಂದಿದೆ.
ಸಿಂಧನೂರು ನಗರದ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ಆಮೆ ವೇಗದಲ್ಲಿದ್ದು, ಉದ್ಘಾಟನೆ ಯಾವಾಗ ಎಂಬ ಪ್ರಶ್ನೆ ಶ್ರೀಸಾಮಾನ್ಯನದ್ದು. ಈ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಮುಂಬರುವ ಶಾಸಕರ ಮೇಲಿದೆ. ಇಂಥ ಅವ್ಯವಸ್ಥೆಯ ಮಧ್ಯೆಯೇ ಮತ್ತೊಂದು ಚುನಾವಣೆಗೆ ಕ್ಷೇತ್ರದ ಮತದಾರರು ಸಜ್ಜಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.