ಬಿಎಸ್ಆರ್, ಕಾಂಗ್ರೆಸ್, ಕೆಜೆಪಿ ನನ್ನ ನೇರ ಪ್ರತಿಸ್ಪರ್ಧಿ: ನಾಯ್ಕ
ಮುದಗಲ್: ಆಡಳಿತಾರೂಢ ಶಾಸಕ ಜೆಡಿಎಸ್ ಅಭ್ಯರ್ಥಿ ವಜ್ಜಲ್ರ ಆಡಳಿತ ವಿರೋಧಿ ಅಲೆ ಇದ್ದುದರಿಂದ ನನಗೆ ಬಿಎಸ್ಆರ್ ಕಾಂಗ್ರೆಸ್ ಮತ್ತು ಕೆಜೆಪಿ ನೇರ ಪ್ರತಿಸ್ಪರ್ಥಿ ಎಂದು ಬಿಜೆಪಿ ಅಭ್ಯರ್ಥಿ ಟಿ.ಆರ್. ನಾಯ್ಕ ಹೇಳಿದರು.
ಆಶೀಹಾಳ ತಾಂಡಾದ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸ್ವಾಭಿಮಾನ- ಮರ್ಯಾದೆ ಇದ್ದರವರು ಕಾಂಗ್ರೆಸ್ ಪಕ್ಷದಲ್ಲಿ ಇರಬಾರದು. ಕಳೆದ 5 ವರ್ಷದಿಂದಲೂ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದರೂ ಟಿಕೆಟ್ ಹಂಚಿಕೆಯಲ್ಲಿ ಮೋಸ ಮಾಡಿದ್ದಾರೆ. ಎಸ್ಸಿಎಸ್ಟಿ ಜನಾಂಗದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕಾಳಜಿ ಇಲ್ಲ. ಆ ಸಮುದಾಯವನ್ನು ಬರೀ ಮತ ಬ್ಯಾಂಕ್ನ್ನಾಗಿ ಬಳಸಿಕೊಳ್ಳಲಾಗುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ನನಗೆ ಯಾವುದೇ ರೀತಿಯ ತೊಂದರೆಯಿಲ್ಲ. ನನಗೆ ಬಿಎಸ್ಆರ್ ಮತ್ತು ಕೆಜೆಪಿ ಮಾತ್ರ ನೇರ ಪ್ರತಿಸ್ಪರ್ಥಿ. ಹಿಂದಿನ ಶಾಸಕರು ಗ್ರಾಮೀಣ ಭಾಗದಲ್ಲಿ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆಯ ಗೊಂದಲದಲ್ಲಿ ಅಸಮಾಧಾನದ ಮೂಲಕ ತೇಲಾಡುವ ಹಡಗಾಗಿದೆ. ನಾನು ಕಾಂಗ್ರೆಸ್ನಿಂದ ಟಿಕೆಟ್ ವಂಚಿತನಾದರೂ ಕಳೆದ 5 ವರ್ಷದಿಂದ ಕ್ಷೇತ್ರದ ಜನತೆಯ ಒಡನಾಡಿಯಾಗಿದ್ದೆ. ಕ್ಷೇತ್ರದ ಜನತೆಯ ಒತ್ತಾಯದ ಮೇರೆಗೆ ಬಿಜೆಪಿಯ ಟಿಕೆಟ್ ಪಡೆಯಬೇಕಾಯಿತು. ಕ್ಷೇತ್ರದ ಎಲ್ಲ ಸಮುದಾಯದವರು ನನಗೆ ಆಶೀರ್ವಾದ ಮಾಡಲಿದ್ದು, ಕ್ಷೇತ್ರದಲ್ಲಿ ನಾನು ಸ್ಥಳೀಯ ಅಭ್ಯರ್ಥಿ ಏಕೈಕ ಎನ್ನುವುದು ಜನತೆಗೆ ಹೆಮ್ಮೆ ತಂದಿದೆ. ಕ್ಷೇತ್ರದ ಮುಸ್ಲಿಮರು ನನ್ನನ್ನು ಸಹೋದರನಂತೆ ಕಾಣುತ್ತಿದ್ದು, ನನಗೆ ಪ್ರತಿಯೊಂದು ಗ್ರಾಮ, ಪಟ್ಟಣದಲ್ಲಿ ಆಶೀರ್ವದಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನಗೆ ಬೆಂಬಲ ಸೂಚಿಸಿ ಮತಯಾಚನೆಯ ಮೂಲಕ ನನಗೆ ಗೆಲುವು ತಂದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಅವರ ಪತ್ನಿ ಶ್ರೀಮತಿ ಲಕ್ಷ್ಮೀ, ಗುಲ್ಬರ್ಗ ಜಿಪಂ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿಬಾಯಿ ಶಂಕರ ಚವ್ವಾಣ, ವಿರುಪಾಕ್ಷಪ್ಪ ಸಾಹುಕಾರ, ಶಂಕರ ಚವ್ವಾಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

