ರಾಯಚೂರು

ಸುಕಾಲಪೇಟೆ; ಕ್ಷೀರಭಾಗ್ಯಕ್ಕೆ ವೆಂಕಟೇಶ ಚಾಲನೆ

Published On :

ಕನ್ನಡಪ್ರಭ ವಾರ್ತೆ   ಸಿಂಧನೂರು   ಆ.2
ಮಕ್ಕಳಲ್ಲಿ ಉತ್ತಮ ಕಲಿಕೆಯಾಗಲು ಉತ್ತಮ ಆರೋಗ್ಯಬೇಕು. ಶಾಲಾ ಮಕ್ಕಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿದ ಕ್ಷೀರಭಾಗ್ಯ ಯೋಜನೆಯಿಂದ ರೋಗನಿರೋಧಕ ಹೆಚ್ಚುತ್ತದೆ ಎಂದು ಕನಕನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಸದಸ್ಯ ವೆಂಕಟೇಶ ಬಾದರ್ಲಿ ಹೇಳಿದರು.
ನಗರದ ಕನಕನಗರ ಸಿಆರ್ಸಿ ವ್ಯಾಪ್ತಿಯ ಸುಕಾಲಪೇಟೆಯ ಸರ್ಕಾರಿ ಪ್ರೌಢಶಾಲೆ ಮತ್ತು ಕನಕನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳ ಹಾಲು ವಿತರಿಸಿ ಮಾತನಾಡಿದರು. ಇಂದು ಶಿಕ್ಷಣದ ಶ್ರೇಯೋಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಪ್ರಯತ್ನಿಸುತ್ತಿವೆ. ಮಕ್ಕಳಲ್ಲಿ ದೈಹಿಕ ಸದೃಢತೆಯ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಲು ಮಕ್ಕಳ ಆರೋಗ್ಯಕ್ಕೆ ಸಂಪೂರ್ಣ ಆಹಾರವನ್ನು ಒದಗಿಸುತ್ತದೆ ಎಂದರು.
ಡಯಟ್ ಹಿರಿಯ ಉಪನ್ಯಾಸಕ ಭೀಮ ನಾಯಕ ಮಾತನಾಡಿ, ಸರ್ಕಾರದ ಆಶಾದಾಯಕ ಕಾರ್ಯಕ್ರಮವಾದ ಕ್ಷೀರಭಾಗ್ಯ ಯೋಜನೆಯ ಯಶಸ್ಸು ಕೇವಲ ಶಿಕ್ಷಕರೊಬ್ಬರಿಂದಲೇ ಸಾಧ್ಯವಿಲ್ಲ. ಎಸ್ಡಿಎಮ್ಸಿ ಹಾಗೂ ಸಮುದಾಯದವರು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.
ಕನಕನಗರ ಸಿಆರ್ಪಿ ವೀರೇಶ ಗೋನವಾರ ಪ್ರಾಸ್ತಾವಿಕ ಮಾತನಾಡಿ ಘನ ಸರ್ಕಾರದ ಈ ಆಶಾದಾಯಕ ಯೋಜನೆಯ ಕುರಿತ ಸಮಗ್ರ ಅಂಶಗಳನ್ನು ತಿಳಿಸಿದರು.
ವೇದಿಕೆ ಮೇಲೆ ನಗರಸಭಾ ಸದಸ್ಯರಾದ ನಾಗಪ್ಪ ಗಿರಿಜಾಲಿ, ಗ್ಯಾನಪ್ಪ, ಲಕ್ಷ್ಮೀ ರಮೇಶ, ಎಸ್ಡಿಎಮ್ಸಿ ಅಧ್ಯಕ್ಷ ಬೀರಪ್ಪ ಮಾಡಗಿರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೀರನಗೌಡ ಮಾಲಿಪಾಟೀಲ, ಪ್ರಾಥಮಿಕ ಶಾಲಾ ಮು.ಗು. ಶಂಷಾವಲಿ, ಸಿಆರ್ಪಿ ರಾಮದಾಸ ಲಿಂಗರಾಜ ಹೂಗಾರ, ಶ್ರೀಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಈರಣ್ಣ ಸೇರಿದಂತೆ ಇನ್ನಿತರರಿದ್ದರು.
ನಾಗಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಹೊಳಿಯಪ್ಪ ಸ್ವಾಗತಿಸಿದರು. ಶಿಕ್ಷಕ ಭಾರತೀಶ ಕೆ.ಆರ್. ನಿರೂಪಿಸಿ, ಶಿಕ್ಷಕಿ ಟಿ. ನೀಲಮ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.