ರಾಯಚೂರು

ವಿದ್ಯಾವಂತರಾಗಿಯೂ ಅಂಧಾನುಕರಣೆ ಮಾಡುವುದು ಅಜ್ಞಾನದ ಪರಮಾವಧಿ

Published On :

ಸಿಂಧನೂರು: ಶಿಕ್ಷಣದಲ್ಲಿ ಅನೇಕ ಪದವಿಗಳನ್ನು ಪಡೆದು ಮೂಢನಂಬಿಕೆಗಳನ್ನು ಆಚರಿಸಿದರೆ ಅದು ಅಜ್ಞಾನ. ಯಾರು ಮೂಢನಂಬಿಕೆಗಳಿಂದ ಹೊರ ಬಂದಿರುವರೋ ಅಂತವರು ಜ್ಞಾನಿಗಳು ಎಂದು ಬಸವಕೇಂದ್ರದ ಮುಖಂಡ ಮಹಾದೇವಪ್ಪ ಗೊರೇಬಾಳ ಹೇಳಿದರು.
ಅವರು ಶ್ರಾವಣಮಾಸದ ಅಂಗವಾಗಿ ಸೋಮವಾರ ಬಸವ ಚಾರಿಟೇಬಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ ನಿವಾಸದಲ್ಲಿ ಬಸವ ಕೇಂದ್ರದಿಂದ ಹಮ್ಮಿಕೊಂಡಿದ್ದ ವಚನ ಜ್ಯೋತಿ ಕಾರ್ಯಕ್ರಮ ಹಾಗೂ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.
ಮಾರ್ಗದರ್ಶನ: ಅದೆಷ್ಟೋ ಮಕ್ಕಳಿಗೆ ಕುಡಿಯಲು ಹಾಲು ಸಿಗುತ್ತಿಲ್ಲ. ಆದರೆ ಕಲ್ಲು ಹಾವಿಗೆ ಹಾಲೆರೆಯುತ್ತೇವೆ. ವಚನ ಸಾಹಿತ್ಯವು ಎಲ್ಲರಿಗೂ ಮಾರ್ಗದರ್ಶನವಾಗಿದೆ. ಅರಿವು, ಅನುಭವ, ಆಚಾರಗಳ ಮೂಲಕ ಜ್ಞಾನ ಸಂಪಾದಿಸಬೇಕು. ವಚನಗಳನ್ನು ಮನನ ಮಾಡಿಕೊಳ್ಳುವ ಮೂಲಕ ಜ್ಞಾನದ ಜೀವನ ನಡೆಸಬೇಕಿದೆ. ಅರಿವಿನ ತೃಪ್ತಿಗೆ ಅನುಭಾವ ಲೇಸು ಎಂದರು.
ಬಸವ ಕೇಂದ್ರದ ಸಂಚಾಲಕ ಪುಟ್ಟಸ್ವಾಮಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.  
ಕರ್ನಾಟಕ ರಾಜ್ಯ ಸರ್ಕಾ ರಿ ನೌಕರರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ಹಿರೇಮಠರಿಗೆ ಹಾಗೂ ಜಿಲ್ಲಾ ಅತ್ಯುತ್ತಮ ವರದಿಗಾರ ಪ್ರಶಸ್ತಿ ಪಡೆದ ಅಮರೇಶ ಅಲಬನೂರರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.