ರಾಯಚೂರು

ಮುದಗಲ್ ಪಿಎಸ್ಐ ಬಿಸನಕೊಪ್ಪ ವರ್ಗಾವಣೆ ರದ್ದುಪಡಿಸಲು ಒತ್ತಾಯ

Published On :

ಕ.ಪ್ರ.ವಾರ್ತೆ, ಮುದಗಲ್, ಅ.21
ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ ಬಿಸನಕೊಪ್ಪ ಅವರ ವರ್ಗಾವಣೆ ರದ್ದುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತು.
ಬಸವರಾಜ ಬಿಸನಕೊಪ್ಪ ಠಾಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಅವರನ್ನು ಅಮಾನತುಗೊಳಿಸಲಾಗಿತ್ತು. ಅವರೊಂದಿಗೆ ಮಸ್ಕಿ ಸಿಪಿಐ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಹಿರಿಯ ಅಧಿಕಾರಿಯ ಅಮಾನತು ಆದೇಶ ರದ್ದುಪಡಿಸಿ ಪುನಹ ಅದೇ ಠಾಣೆಗೆ ನಿಯೋಜನೆಗೊಳಿಸಲಾಗಿದೆ. ಆದರೆ, ಮುದಗಲ್ ಠಾಣೆಯಿಂದ ಜಾಲಹಳ್ಳಿ ಠಾಣೆಗೆ ವರ್ಗಾವಣೆ ಮಾಡಿರುವುದು ಸಮರ್ಪಕವಾದುದಲ್ಲ ಎಂದು ಐಜಿಪಿ ಅವರಿಗೆ ಬರೆದ ಮನವಿಯಲ್ಲಿ ತಿಳಿಸಿದ್ದಾರೆ.
ಬಸವರಾಜ ಬಿಸನಕೊಪ್ಪ ಅವರು ಪಟ್ಟಣದಲ್ಲಿ 7 ತಿಂಗಳ ಉತ್ತಮ ಸೇವೆ ಸಲ್ಲಿಸಿದ್ದಾರೆ. ದಕ್ಷ ಅಧಿಕಾರಿಯಾಗಿದ್ದಾರೆ. ಅವರಿಗೆ ಮೇಲಾಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಪುನಹ ಅವರನ್ನು ಮುದಗಲ್ ಠಾಣೆಗೆ ನಿಯುಕ್ತಿಗೊಳಿಸಬೇಕು. ವಾರದೊಳಗೆ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಬೇಕು. ಮುದಗಲ್ ಠಾಣೆಗೆ ನೇಮಿಸಬೇಕು. ಇಲ್ಲದಿದ್ದರೆ ಸಮಸ್ತ ನಾಗರಿಕರೊಂದಿಗೆ ರಕ್ಷಣಾ ವೇದಿಕೆ ಅನಿರ್ದಿಷ್ಟ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಐಜಿಪಿಯವರಿಗೆ ಬರೆದ ಮನವಿಯನ್ನು ಠಾಣೆಯ ಪಿಎಸ್ಐ ಎಸ್.ಪಿ. ಹಿರೇಮಠರಿಗೆ ನೀಡಿದರು. ಪ್ರತಿಭಟನೆ ನೇತೃತ್ವವನ್ನು ಕರವೇ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ. ನಹಿಂ, ಎಸ್.ಎನ್. ಖಾದ್ರಿ, ಎಂ.ಡಿ. ಇಸ್ಮಾಯಿಲ್, ಈರಪಣ್ಣ, ತಿಮ್ಮನಗೌಡ, ಲೋಕೇಶ, ಸುಭಾಷ, ಸಮೀರ್, ಅಬ್ದುಲ್, ಹಸನ್, ಬಾಬು ಉಪ್ಪಾರ, ಅನ್ವರ ಮಿಯಾ, ನಾಗರಾಜ ಮಟ್ಟೂರು, ಬಸವರಾಜ ಹೂನೂರು, ರಮೇಶ, ಲಕ್ಷ್ಮೀಪತಿ ಹಾಗೂ ಕರ್ನಾಟಕ ದಲಿತ ಫ್ಯಾಂಥರ್ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.