ಎಸ್ಎಸ್ಎಲ್ಸಿ ಸಾಧಕರಿಗೆ ಗೌರವ
ಸಿಂಧನೂರು: ತಾಲೂಕಿನ ಪಗಡದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿವರ್ಷ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಹಣ ನೀಡಿ ಪುರಸ್ಕರಿಸಲಾಯಿತು.
ಪಗಡದಿನ್ನಿ ಕ್ಯಾಂಪಿನ ಹಿರಿಯ ನಾಗರಿಕರಾದ ಎಚ್. ಶ್ರೀನಿವಾಸಲು ಹಾಗೂ ಪಿ. ರಾಮರೆಡ್ಡಿ ಪಗಡದಿನ್ನಿ 2 ಸಾವಿರ ರೂಪಾಯಿ ಮತ್ತು ಪಗಡದಿನ್ನಿ ಗ್ರಾಮದ ಹಿರಿಯ ಮುಖಂಡ ತಾಪಂ ಮಾಜಿ ಸದಸ್ಯ ವಿಶ್ವನಾಥಸ್ವಾಮಿ ಪುರಸ್ಕಾರ ಪತ್ರಿಕೆ ನಗದು 2 ಸಾವಿರ ಪುರಸ್ಕಾರ ನೀಡಿ ಮಕ್ಕಳ ವ್ಯಾಸಂಗಕ್ಕೆ ನೆರವು ನೀಡಿದರು.
ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ರವಿ ತಂದೆ ಅಂಬಣ್ಣ ಈ ವಿದ್ಯಾರ್ಥಿಗೆ ನಗದು 10 ಸಾವಿರ ರೂಪಾಯಿ ಮತ್ತು ಎರಡನೇ ಸ್ಥಾನ ಪಡೆದ ಸೋಮಶೇಖರ ತಂದೆ ಮುದಕಪ್ಪ ಈ ವಿದ್ಯಾರ್ಥಿಗೆ 5 ಸಾವಿರ ಎಚ್. ಶ್ರೀನಿವಾಸಲು ನೀಡಿ ಪ್ರೋತ್ಸಾಹಿಸಿದ್ದು ಹಿಂದುಳಿದ ಈ ಪ್ರದೇಶದಲ್ಲಿ ವ್ಯಾಸಂಗಕ್ಕೆ ನೆರವು ನೀಡುವ ದಾನಿಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕೆ ಅನುಕೂಲ ವಾಗುತ್ತದೆ ಎಂದು ಪೋಷಕರು ಶ್ಲಾಘಿಸಿದ್ದಾರೆ.
ಸನ್ಮಾನ: ಪಗಡದಿನ್ನಿ ಕ್ಯಾಂಪಿನ ಹಿರಿಯ ನಾಗರಿಕರಾದ ಎಚ್. ಶ್ರೀನಿವಾಸಲು, ಪಗಡದಿನ್ನಿ ಗ್ರಾಮದ ಹಿರಿಯ ಮುಖಂಡ ತಾಪಂ ಮಾಜಿ ಸದಸ್ಯ ವಿಶ್ವನಾಥಸ್ವಾಮಿ ಮತ್ತು ಪಿ.ರಾಮರೆಡ್ಡಿ ಪಗಡದಿನ್ನಿ ಸರ್ಕಾರಿ ಪ್ರೌಢಶಾಲೆಯ ಶಾಲಾ ಸುಧಾರಣ ಸಮಿತಿ ಮಾಜಿ ಸದಸ್ಯರಾದ ಅಮರೇಗೌಡ ಇವರನ್ನು ಮುಖ್ಯಗುರು ಗಿರಿಜಮ್ಮ ಮತ್ತು ಶಿಕ್ಷಕ ಸಿಬ್ಬಂದಿ ಸನ್ಮಾನ ಮಾಡಿ ಗೌರವಿಸಿದರು.
ಗ್ರಾಪಂ ಅಧ್ಯಕ್ಷೆ ಹೇಮಮ್ಮ ಮುಳ್ಳೂರು, ಪಗಡದಿನ್ನಿ ಸರ್ಕಾರಿ ಪ್ರೌಢಶಾಲೆಯ ಸುಧಾರಣ ಸಮಿತಿ ಮಾಜಿ ಸದಸ್ಯರಾದ ಮಲ್ಲಿಕಾಜುನಗೌಡ ಪ್ರಾಥಮಿಕ ಶಾಲಾ ಸಿಬ್ಬಂದಿ ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
--
ಕಾಪಿ ರೈಟ್ ಕಾಯಿದೆ ಉಲ್ಲಂಘನೆ: ಬಂಧನ
ರಾಯಚೂರು: ಕಾಪಿರೈಟ್ ಕಾಯಿದೆ ಉಲ್ಲಂಘಿಸಿ ಡಿಪ್ಲೊಮಾ ಎಂಜಿನಿಯರಿಂಗ್ ಪುಸ್ತಕಗಳನ್ನು ಜೆರಾಕ್ಸ್ ಮಾಡಿ ಮಾರಾಟ ಮಾಡುತ್ತಿದ್ದ ರಾಜಶೇಖರ್ ಎಂಬುವವನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಈತ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಜೆರಾಕ್ಸ್ ಅಂಗಡಿ ನಿರ್ವಹಿಸುತ್ತಿದ್ದ. ಅಲ್ಲಿಯೇ ಸ್ವಪ್ನ ಬುಕ್ ಹೌಸ್ನ ಬುಕ್ಗಳನ್ನು ಜೆರಾಕ್ಸ್ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಸ್ವಪ್ನ ಬುಕ್ ಹೌಸ್ನವರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಸದರ್ ಬಜಾರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

