6ರಂದು ದಲಿತ ಚಳವಳಿಗೆ ದುಡಿದು ಮಡಿದವರ ಸ್ಮರಣೆ
ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.1
ದಲಿತ ಚಳವಳಿಯ ಯಶಸ್ಸಿಗೆ ದುಡಿದು ಮಡಿದವರ ಕುಟುಂಬದವರಿಗೆ ಸನ್ಮಾನದ ಗೌರವ. ಎಲ್ಲ ಜಾತಿ ಜನಾಂಗದ ಮುಖಂಡರುಗಳ ಉಪಸ್ಥಿತಿಯ ಮಧ್ಯೆ ಹೈದರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಡಿ. 6ರಂದು ನಗರದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರರ 57ನೇ ಮಹಾ ಪರಿನಿರ್ವಾಣ ದಿನಾಚರಣೆ ಆಚರಿಸಲಿದೆ.
ನಗರದಲ್ಲಿ ಭಾನುವಾರ ಹೈ.ಕ.ದಲಿತ ಸಂಷರ್ಘ ಸಮಿತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ರಾಮಾಂಜನೇಯಲು ಈ ವಿಷಯ ತಿಳಿಸಿ, ಜಿಲ್ಲೆಯಲ್ಲಿ ಇದುವರೆಗೆ ದಲಿತ ಚಳವಳಿ ಕಟ್ಟಿ ಬೆಳೆಸುವಲ್ಲಿ ಅನೇಕರು ಶ್ರಮಿಸಿದ್ದಾರೆ. ಚಳವಳಿಯ ಯಶಸ್ಸಿಗೆ ಅನೇಕರು ದುಡಿದು ಮಡಿದಿದ್ದಾರೆ. ಅಂಥವರನ್ನು ಸ್ಮರಣೆಗೆ ಮಹಾಪರಿನಿರ್ವಾಣ ದಿನಾಚರಣೆ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಉಪನ್ಯಾಸ: ಜಿಲ್ಲೆಯಲ್ಲಿ ಈ ಹಿಂದೆ ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಪುರುಷೋತ್ತಮ ಕಲಾಲಬಂಡಿ, ಉಪನ್ಯಾಸಕರ ಜೆ.ಎಲ್. ಈರಣ್ಣ, ಅಮರೇಶ್ ಬಲ್ಲಿದವ್, ರವಿಕಿರಣ್ ಅವರು ಅಂಬೇಡ್ಕರರ ಮಹಾಪರಿನಿರ್ವಾಣದ ದಿನದ ವಿಶೇಷ ಉಪನ್ಯಾಸ ನೀಡಲಿದ್ದಾರೆಂದು ತಿಳಿಸಿದರು.
ಸಾನ್ನಿಧ್ಯ: ನಗರದ ರಂಗಮಂದಿರದಲ್ಲಿ ಡಿ. 6ರಂದು ಬೆಳಗ್ಗೆ 11.30ಕ್ಕೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಕಿಲ್ಲೆಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್, ಉಪಾಧ್ಯಕ್ಷ ಕೆ.ಶರಣಪ್ಪ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಎನ್. ಭಾನುರಾಜ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು.
ದಲಿತ ಸಾಹಿತಿ ಸಿ. ದಾನಪ್ಪ ನಿಲಗಲ್, ಹನುಮದಾಸ್, ಜಿಪಂ ಸದಸ್ಯ ಅಸ್ಲಂಪಾಷಾ, ನಗರಸಭೆ ಸದಸ್ಯರಾದ ಎಂ.ಪವನ್ ಕುಮಾರ್,ಪಿ.ಯಲ್ಲಪ್ಪ, ಮಹಾಲಿಂಗ ರಾಂಪೂರ, ಸಿಐಟಿಯು ಅಧ್ಯಕ್ಷೆ ಎಚ್. ಪದ್ಮಾ ಸೇರಿದಂತೆ ಜಿಲ್ಲೆಯ ಪ್ರಮುಖರು ಗಣ್ಯರು ಪಾಲ್ಗೊಳ್ಳುವರೆಂದು ಹೇಳಿದರು.
ಸನ್ಮಾನ: ಮಹಾಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿ ಮಡಿದವರ ಕುಟುಂಬದವರನ್ನು ಸನ್ಮಾನಿಸಲಾಗುತ್ತದೆ. ಈ ಸಮಾರಂಭಕ್ಕೆ ಎಲ್ಲ ಜಾತಿ ಜನಾಂಗದ ಪ್ರಮುಖರನ್ನು ಈ ಬಾರಿ ಆಹ್ವಾನಿಸಿರುವುದು ವಿಶೇಷ ಎಂದ ಅವರು, ಎಲ್ಲರೂ ಸೇರಿ ಅಂಬೇಡ್ಕರರ ಮಹಾಪರಿನಿರ್ವಾಣ ದಿನಾಚರಣೆ ಆಚರಿಸುವುದು ಹೆಚ್ಚು ಸೂಕ್ತ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ಗೋವಿಂದರಾಜು, ಶರಬಣ್ಣ, ಆಲಿಸಾಬ್, ರಂಗಪ್ಪ, ಹೊನ್ನಪ್ಪ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

