ನಾಯ್ಕಗೆ ಸೋಲಿನ ಭೀತಿ: ಕಾಂಗ್ರೆಸ್
ಮುದಗಲ್: ಬಿಜೆಪಿ ಮುಖಂಡ ಟಿ.ಆರ್. ನಾಯ್ಕ ಅವರು ಮಾಜಿ ಸಚಿವ ಬಯ್ಯಾಪುರ ಕುರಿತು ವೈಯಕ್ತಿಕ ಹೇಳಿಕೆ ನೀಡಿರುವುದಕ್ಕೆ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರಖಾನ್ ನೇತೃತ್ವದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ, ಬಿಜೆಪಿ ಮುಖಂಡ ಟಿ.ಆರ್. ನಾಯ್ಕ ಅವರು ನಿವೃತ್ತಿಯಾದ ನಂತರ ಕೇವಲ ಒಂದು ವರ್ಷಕ್ಕೆ ಸೀಮಿತವಾಗಿ ಕಾಂಗ್ರೆಸ್ಸಲ್ಲಿದ್ದವರು. ಮಾಜಿ ಸಚಿವ ಬಯ್ಯಾಪುರ ಮಾತು ಕೊಟ್ಟಂತೆ ಹೂಲಗೇರಿಯವರಿಗೆ ಟಿಕೆಟ್ ಕೊಡಿಸಿದರು. ಆದರೆ ಟಿ.ಆರ್. ನಾಯ್ಕ ಅವರು ಟಿಕೆಟ್ ದೊರಕದೇ ಇರುವುದಕ್ಕೆ ಕೇವಲ ಮೂರು ದಿನಗಳಲ್ಲಿ ಬೇರೆ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿ ಸೋಲುಂಡರು.
ಮಾಜಿ ಸಚಿವ ಬಯ್ಯಾಪುರ ಅವರ ಕುರಿತು ಸರ್ವಾಧಿಕಾರದ ರಾಜಕಾರಣ, ದ್ರೋಹ ಎಸಗಿದ್ದಾರೆ ಎನ್ನುವ ನಾಯ್ಕ ಅವರ ಹೇಳಿಕೆ ಖಂಡನೀಯ. ಸೋಲಿನ ಹತಾಶೆಯಿಂದ ಬುದ್ಧಿಭ್ರಮಣೆಯಾದವರಂತೆ ಮಾತನಾಡುತ್ತಿದ್ದಾರೆ. ತಾಕತ್ತಿದ್ದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆದು ತೋರಿಸಲಿ ಎಂದು ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

