ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ
ಸಿಂಧನೂರು: ಪಿಕ್‌ಅಪ್ ಡ್ಯಾಂಗೆ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಭೂ ಪರಿಹಾರ ನೀಡದೇ ವಿಳಂಬ ಮಾಡಿದ ನೀರಾವರಿ ಇಲಾಖೆಯ ನಂ.3 ಕಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಾರ್ಯಾಲಯದ ವಿವಿಧ ಸಲಕರಣೆಗಳನ್ನು ಸ್ಥಳೀಯ ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದೆ.
ತಾಲೂಕಿನ ಗೊರೇಬಾಳ ಪಿಕ್‌ಅಪ್ ಡ್ಯಾಂ ನಿರ್ಮಾಣಕ್ಕೆ 2000ರಲ್ಲಿ ವಿರೂಪಾಕ್ಷಪ್ಪ ಮತ್ತು ಉಮಾದೇವಿ ಎನ್ನುವ ರೈತರ 3 ಎಕರೆ ಭೂಮಿಯನ್ನು ಸ್ವಾಧೀನ ಮಾಡಿರುವ ನೀರಾವರಿ ಇಲಾಖೆ 2006ರಲ್ಲಿ 9 ಲಕ್ಷ ನೀಡಿದೆ. ಇನ್ನುಳಿದ ಬಾಕಿ 12.71 ಲಕ್ಷ ನೀಡದೆ ಸತಾಯಿಸಿದೆ. ಹಲವಾರು ಬಾರಿ ರೈತರ ಪರ ವಕೀಲ ವೀರೇಶ ಪನ್ನೂರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ನೀರಾವರಿ ಇಲಾಖೆಯ ಆಸ್ತಿಯನ್ನು ಜಪ್ತಿ ಮಾಡಲು ಅ.10, 2013ರಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾದೀಶ ಶಶಿಧರ ಅವರಿಂದ ಆಸ್ತಿ ಜಪ್ತಿಗೆ ಆದೇಶ ಪಡೆದಿದ್ದರು.
ಮೂರು ಸಿಪಿಯು, ಎರಡು ಮಾನಿಟರ್, ಎರಡು ಪ್ರಿಂಟರ್, ಫ್ಯಾನ್, ಜೆರಾಕ್ಸ್, ಫ್ಯಾಕ್ಸ್ ಮೆಷಿನ್, ಕುರ್ಚಿ, ಮೇಜು, ಯುಪಿಎಸ್ ಇನ್ನಿತರೆ ವಸ್ತುಗಳನ್ನು ಕಾರ್ಯಪಾಲಕ ಎಂಜಿನಿಯರ್ ಎಂ.ಆರ್. ಮುಲ್ಲಾ ಅವರ ಎದುರಿನಲ್ಲಿಯೇ ಜಪ್ತಿ ಮಾಡಲಾಯಿತು. ನ್ಯಾಯಾಲಯದ ಸಿಬ್ಬಂದಿ ಇಲಾಖೆಯ ಆಸ್ತಿಯನ್ನು ಜಪ್ತಿ ಮಾಡುವ ಸಂದರ್ಭದಲ್ಲಿ ವ್ಯವಸ್ಥಾಪಕ ಖಾಜಾ ಮೊಹಿನುದ್ದೀನ್, ಭೂಸ್ವಾಧೀನ ಗುಮಾಸ್ತ, ಸಿಬ್ಬಂದಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

