ರಾಯಚೂರು

ಸಮರ್ಪಕ ವಿದ್ಯುತ್‌ಗೆ ರೈತ ಸಂಘ ಒತ್ತಾಯ

Published On :

ಲಿಂಗಸ್ಗೂರು: ಸರ್ಕಾರದ ನಿಯಮಾನುಸಾರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ತಹಸೀಲ್ದಾರ್ ಜಿ.ಎಸ್. ಮಹಾಜನ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬೇಸಿಗೆ ಹಂಗಾಮಿನಲ್ಲಿ ರೈತರು ಶೇಂಗಾ, ಸೂರ್ಯಕಾಂತಿ, ತರಕಾರಿ, ಈರುಳ್ಳಿ, ಬತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದು, ಪಂಪ್‌ಸೆಟ್‌ಗಳಿಗೆ ನಿಯಮಾನುಸಾರ ವಿದ್ಯುತ್ ಪೂರೈಕೆ ಮಾಡದ ಕಾರಣ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪಂಪ್‌ಸೆಟ್‌ಗಳಿ ಅನುಸಾರವಾಗಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಬೇಡಿಕೆಗಳು: ತಾಲೂಕಿನ ಯರಗೋಡಿ ಗ್ರಾಮದ ರೈತರಿಗೆ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಗೌಡೂರು ಗ್ರಾಮದ 12 ರೈತರ ಪಂಪ್‌ಸೆಟ್‌ಗಳು ವರ್ಕ್ ಆರ್ಡರ್ ಆಗಿದ್ದು, ಗ್ರಾಮದ ವಿದ್ಯುತ್ ಪರಿವರ್ತಕದಿಂದ ಸಂಪರ್ಕ ನೀಡಲಾಗಿದೆ. ಇದರಿಂದ ಪರಿವರ್ತಕಕ್ಕೆ ಹೆಚ್ಚು ಭಾರ ಬೀಳುವ ಕಾರಣ ಸರಿಯಾಗಿ ನಡೆಯುತ್ತಿಲ್ಲ. ರೈತರಿಗೆ ಪ್ರತ್ಯೇಕ ಪರಿವರ್ತಕ ಅಳವಡಿಸಬೇಕು. ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ತಾಲೂಕು ಉಪಾಧ್ಯಕ್ಷ ಶಿವಣ್ಣ ಭೂಪೂರ, ರೈತ ಮುಖಂಡರಾದ ಸಿದ್ದೇಶ ಗೌಡೂರು, ಅಮರೇಗೌಡ ಗೋನವಾಟ್ಲ, ಹನುಮಂತ ಪೂಜಾರಿ, ದುರುಗಪ್ಪ ಗೋನವಾಟ್ಲ, ಅಮರಯ್ಯಸ್ವಾಮಿ, ಜಹೀರ್ ಪಾಶಾ ಗುಡಿಹಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.