ಮಂಪರು ಪರೀಕ್ಷೆಗೆ ಸಿದ್ಧ: ಸವಾಲು
ರಾಯಚೂರು: ರಾಯಚೂರಿನಲ್ಲಿರೋ ಸಂಘಟನೆಗಳು ವಸೂಲಿ ಸಂಘಟನೆಗಳಾಗಿವೆ. ಹಣಕ್ಕಾಗಿ ಅಧಿಕಾರಿಗಳಿಗೆ ಪೀಡಿಸೋದೇ ಅವರ ಕೆಲಸ ಎಂದು ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಆರೋಪ ಸಾಬೀತುಪಡಿಸಬೇಕು. ಈ ಬಗ್ಗೆ ಸಂಘಟನೆಗಳ ಎಲ್ಲ ಪ್ರಮುಖರೂ ಮಂಪರು ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ವಿವಿಧ ಸಂಘಟನೆಗಳ ಪ್ರಮುಖರು ಸವಾಲು ಹಾಕಿದ್ದಾರೆ.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈ.ಕ. ವಿಮೋಚನಾ ವೇದಿಕೆಯ ಮುಖಂಡ ಅಂಬಣ್ಣ ಅರೋಲಿಕರ್, ಜಿಲ್ಲಾಧಿಕಾರಿಗಳು ಈಚೆಗೆ ವಿವಿಧ ಸಂಘಟನೆಗಳ ಬಗ್ಗೆ ಹಣ ವಸೂಲು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅವರು ಈ ಬಗ್ಗೆ ಸಾಬೀತು ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆಗಳು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮತ್ತು ಅಕ್ರಮದ ವಿರುದ್ಧ ಹೋರಾಟ ಮಾಡುವುದನ್ನು ಹತ್ತಿಕ್ಕಲು ಹಾಗೂ ಸಾನರ್ವಜನಿಕರ ಗಮನ ಬೇರೆಡೆ ಸೆಳೆಯಲು ಹೇಳಿಕೆ ನೀಡುವುದು ಸರಿಯಲ್ಲ. ಸಂಘಟನೆಗಳ ವಿರುದ್ಧ ಮಾಡಿರುವ ಆರೋಪ ಜಿಲ್ಲಾಧಿಕಾರಿಗಳು ಸಾಬೀತು ಮಾಡಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳವರು ಮಂಪರು ಪರೀಕ್ಷೆ ನಡೆಸಿದಲ್ಲಿ ಅದಕ್ಕೆ ಒಳಪಡಲು ಸಿದ್ಧವಿರುವುದಾಗಿ ಸವಾಲು ಹಾಕಿದರು.
---
ಬೆಳೆಗೆ ಸಹಾಯಧನ; ಅರ್ಜಿ ಆಹ್ವಾನ
ರಾಯಚೂರು: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಾಳೆ ಮತ್ತು ತರಕಾರಿ ಬೆಳೆಗಳಿಗೆ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು ಬೆಳೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಸಹಾಯ ಧನ ನೀಡಲು ಅರ್ಜಿ ಕರೆಯಲಾಗಿದೆ. ಪ್ರತಿ ಎಕರೆ ಬಾಳೆ ಬೆಳೆಗೆ 20 ಸಾವಿರದಂತೆ ಗರಿಷ್ಠ 2 ಎಕರೆಗೆ ಸಹಾಯಧನ ನೀಡಲಾಗುತ್ತದೆ. ಅದೇ ರೀತಿ ತರಕಾರಿಗೆ 13 ಸಾವಿರದಂತೆ ಗರಿಷ್ಠ ಒಂದು ಎಕರೆಗೆ ಸಹಾಯಧನ ವಿತರಿಸಲಾಗುವುದು.
ಮೊದಲು ಬಂದ ಅರ್ಜಿಗೆ ಮೊದಲಾದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲೆಯ ಆಸಕ್ತ ರೈತರು ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

