ರಾಯಚೂರು

ಮರಳು ದಂಧೆಗೆ ಕಡಿವಾಣಕ್ಕೆ ಒತ್ತಾಯ

Published On :

ದೇವದುರ್ಗ: ತಾಲೂಕಿನ ಹೇರುಂಡಿ ಮತ್ತು ಬಾಗೂರು ಗ್ರಾಮಗಳಿಂದ ಅಕ್ರಮ ಮರಳು ಮಾರಾಟ ಎಗ್ಗಿಲ್ಲದೇ ಸಾಗಿದ್ದು ಕೂಡಲೇ ಅದಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹನುಮಂತ ಕಾಕರಗಲ್ ಒತ್ತಾಯಿಸಿದ್ದಾರೆ.
ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳು ಮಾಫಿಯಾ ವ್ಯಾಪಾಕವಾಗಿ ಹರಡಿದ್ದು, ಹೇರುಂಡಿ ಮತ್ತು ಬಾಗೂರು ಗ್ರಾಮಗಳಲ್ಲಿ ಅಕ್ರಮ ಮರಳು ಮಾರಾಟ ರಾಜಾರೋಷವಾಗಿ ಸಾಗಿದೆ. ಹಗಲು ಮತ್ತು ರಾತ್ರಿಯೆನ್ನದೇ ನೂರಾರು ಲಾರಿ, ಟ್ರ್ಯಾಕ್ಟರ್‌ಗಳು ಮರಳು ಹೊತ್ತು ಸಾಗುತ್ತಿವೆ ಎಂದು ಟೀಕಿಸಿದ್ದಾರೆ.
ವಿದ್ಯಾರ್ಥಿಗಳು, ಮಕ್ಕಳಿಗೆ ತೊಂದರೆ: ಮರಳು ಸಾಗಣೆ ವಾಹನಗಳ ಓಡಾಟದಿಂದ ವಿದ್ಯಾರ್ಥಿಗಳು ಮತ್ತು ಚಿಕ್ಕ ಮಕ್ಕಳು ಗ್ರಾಮದ ರಸ್ತೆ ದಾಟಲು ಹೆದರುವಂಥ ಸ್ಥಿತಿಯಿದೆ. ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಮರಳು ಸಾಗಣೆ ಲಾರಿಗಳ ಸಂಚಾರದಿಂದ ಹಾಳಾಗಿವೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಜೊಂಡೆ, ತಶಿವಪ್ಪ ಪಲಕನಮರಡಿ, ನಾಗರಾಜ ಜಂಬಲದಿನ್ನಿ, ಬಸವರಾಜ ಯರಮಸಾಳ, ಹನುಮಂತ ಗಾಣಧಾಳ, ರಾಮಪ್ಪ ಹೇರುಂಡಿ ಪತ್ರ ಬರೆದಿದ್ದಾರೆ.
ಶರಣಮ್ಮ ಪಾಟೀಲ್
ಸಿಂಧನೂರು: ಮಾಜಿ ಶಾಸಕ ದಿ.ಬಸವಂತರಾವ್ ಪಾಟೀಲ್ ಅವರ ಪತ್ನಿ ಶರಣಮ್ಮ(85) ಅವರು ತಾಲೂಕಿನ ಕೆ.ಹೊಸಳ್ಳಿಯಲ್ಲಿ ಶನಿವಾರ ನಿಧನರಾದರು. ಮೃತರ ಅಂತ್ಯಕ್ರಿಯೆ ಕೆ.ಹೊಸಳ್ಳಿಯಲ್ಲಿ ಭಾನುವಾರ ಸಂಜೆ ನಡೆಯಿತು. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಮುದುಕಪ್ಪ ಸಾಹುಕಾರ, ಪಂಪಾಪತಿ ಕೆಸರಟ್ಟಿ, ಶಂಕರಗೌಡ ಗುಂಜಳ್ಳಿ ವಕೀಲ, ಡಾ. ಚನ್ನನಗೌಡ ಪಾಟೀಲ್ ಅನೇಕ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.