ಸರ್ದಾರ್ ಪಟೇಲ್ ಪುಣ್ಯತಿಥಿ; ಏಕತಾ ಓಟ
ರಾಯಚೂರು: ಸರ್ದಾರ್ ಪಟೇಲರ ಪುಣ್ಯತಿಥಿ ಹಾಗೂ ಏಕತಾ ಪ್ರತಿಮೆ ಪ್ರತಿಷ್ಠಾನದ ಅಂಗವಾಗಿ ಇಲ್ಲಿನ ಪಟೇಲ್ ವೃತ್ತದಲ್ಲಿ ಭಾನುವಾರ ರಾಯಚೂರು ವಾಣಿಜ್ಯೋದ್ಯಮ ಸಂಘದಿಂದ ಹಮ್ಮಿಕೊಂಡಿದ್ದ ಪಟೇಲರ ಪ್ರತಿಮೆ ಪ್ರತಿಷ್ಠಾನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರದ ಸೋಮವಾರಪೇಟೆ ಹಿರೇಮಠದ ವೀರರಾಚೋಟಿ ಶಿವಾಚಾರ್ಯ ಶ್ರೀ ಪಟೇಲ್ ವೃತ್ತದಲ್ಲಿ ಪುತ್ಥಳಿಗೆ ಗೌರವ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಏಕತಾ ಓಟದಲ್ಲಿ ನಗರದ ವಿದ್ಯಾರ್ಥಿಗಳು, ಯುವಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ರಾಯಚೂರು ವಾಣಿಜ್ಯೋದ್ಯಮ ಸಂಘ, ಬಿಜೆಪಿ ಜಿಲ್ಲಾ ಘಟಕ, ನಮೋ ಬ್ರಿಗೇಡ್ ಸಮಿತಿ ಹಾಗೂ ಮೋದಿ ಅವರ ನೂರಾರು ಅಭಿಮಾನಿಗಳು ಹಾಗೂ ಯುವಕರು ಏಕತಾ ಓಟದಲ್ಲಿ ಪಾಲ್ಗೊಂಡು, ಮೋದಿ ಮತ್ತು ಸರ್ದಾರ್ ಪಟೇಲ್ ಅವರ ಪರ ಜಯಘೋಷ ಮೊಳಗಿಸಿದರು.
ಪಟೇಲ್ ವೃತ್ತದಲ್ಲಿ ಆರಂಭಗೊಂಡ ಏಕತಾ ಓಟವು ಚಂದ್ರಮೌಳೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್ ಸಿಂಗ್ ವೃತ್ತ, ಸೂಪರ್ ಮಾರ್ಕೆಟ್ ಮೂಲಕ ಸೋಮವಾರಪೇಟೆ ಹಿರೇಮಠಕ್ಕೆ ತಲುಪಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಅಶೋಕ ಗಸ್ತಿ, ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಬಿ.ಜಗದೀಶ ಗುಪ್ತಾ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ಶಂಕ್ರಪ್ಪ, ಬಂಡೇಶ ವಲ್ಕಂದಿನ್ನಿ, ಆರ್. ತಿಮ್ಮಯ್ಯ, ನರಸಪ್ಪ ಯಕ್ಲಾಸಪೂರು, ಬಿ.ಜಗದೀಶ್, ರಾಮು ಹಾಗೂ ನಮೋ ಬ್ರಿಗೇಡ್‌ನ ನೂರಾರು ಸದಸ್ಯರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

