ರಾಯಚೂರು

ಮಾನವಿ ತಾಪಂ; ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಅಂಗೀಕಾರ

Published On :

ರಾಯಚೂರು: ಜಿಲ್ಲೆಯ ಮಾನವಿ ತಾಪಂನ ಅಧ್ಯಕ್ಷೆ ಪಾರ್ವತಿ ಗುರಪ್ಪ ಸಾಹುಕಾರ ಮತ್ತು ಉಪಾಧ್ಯಕ್ಷ ರಾಜಾವಸಂತ ನಾಯಕ ಅವರ ವಿರುದ್ಧ ಮಂಡಿಸಿದ್ದ ಅವಿಶ್ವಾಸಕ್ಕೆ ಬುಧವಾರ ಅಂಗೀಕಾರವಾಗಿದೆ. ಅವಿಶ್ವಾಸದ ಪರ 19 ಜನ ಸದಸ್ಯರು ಬೆಂಬಲಿಸುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಪದಚ್ಯುತಿಗೊಂಡಿದ್ದಾರೆ.
ತಾಪಂನಲ್ಲಿ ಅವಿಶ್ವಾಸ ಸಭೆಯಲ್ಲಿ ಪಾಲ್ಗೊಂಡಿದ್ದ 19 ಜನ ಸದಸ್ಯರು ಅವಿಶ್ವಾಸ ಪರವಾಗಿ ಕೈ ಎತ್ತಿ ಬೆಂಬಲಿಸಿದ್ದರಿಂದ ಅವಿಶ್ವಾಸದ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ ಎಂದು ತಾಪಂ ಇಒ ಹಾಗೂ ಚುನಾವಣಾಧಿಕಾರಿ ಎಸ್.ಎಚ್. ಕೊಪ್ಪರದ ಪ್ರಕಟಿಸಿದರು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಇಒ ಕೊಪ್ಪರದ್ ಅವರು, ತಾಪಂನ ಒಟ್ಟು 30 ಸದಸ್ಯರಲ್ಲಿ ಅಮೀನಗಡ ತಾ.ಪಂ. ಕ್ಷೇತ್ರದ ಸದಸ್ಯರು ಅನರ್ಹಗೊಂಡಿದ್ದಾರೆ. ಹಾಗಾಗಿ ಒಟ್ಟು 29ಕ್ಕೆ ಕುಸಿದಿದ್ದು ಅವರೆಲ್ಲರೂ ಸಭೆಯಲ್ಲಿದ್ದರು.
ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ 19 ಜನ ಅವಿಶ್ವಾಸ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಸಭೆ ಕರೆಯಲಾಗಿತ್ತು. ಅವಿಶ್ವಾಸ ಸಭೆಯಲ್ಲಿ 10 ಜನ ಸದಸ್ಯರು ತಟಸ್ಥರಾದರೆ, 19 ಜನ ಅವಿಶ್ವಾಸಕ್ಕೆ ಬೆಂಬಲಿಸಿದರು. ಅವಿಶ್ವಾಸ ಪರವಾಗಿ ಸದಸ್ಯರ ಸಂಖ್ಯೆ ಹೆಚ್ಚಿದ್ದರಿಂದ ಅಧ್ಯಕ್ಷೆ ಪಾರ್ವತಿ ಗುರುಪ್ಪ ಸಾಹುಕಾರ, ಉಪಾಧ್ಯಕ್ಷ ರಾಜಾವಸಂತ ನಾಯಕರು ಅಧಿಕಾರದಿಂದ ಪದಚ್ಯುತಿಗೊಂಡಿದ್ದಾರೆಂದು ತಿಳಿಸಿದರು. ಸಭೆ ನಡೆದಿರುವ ಬಗ್ಗೆ ಸಹಾಯಕ ಆಯುಕ್ತರಿಗೆ ವರದಿ ನೀಡಲಾಗುವುದು ನಂತರ ಅವರು ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ದಿನಾಂಕ ನಿಗದಿ ಮಾಡಲಿದ್ದಾರೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಗೋವಿಂದರಾಜ್ ವಕೀಲರು ವಹಿಸಿದ್ದರು. ಸಭೆಯಲ್ಲಿ ತಾ.ಪಂ.ನ ಎಲ್ಲ ಸದಸ್ಯರು ಭಾಗವಹಿಸಿದ್ದರು.
ಭದ್ರತೆ: ತಾಪಂ ನ ಅವಿಶ್ವಾಸ ಸಭೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಿಪಿಐ ಹರೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.