'ಅಹಂಕಾರ ತ್ಯಜಿಸಿ ಸಂಸ್ಕಾರವಂತರಾಗಿ'
ಕ.ಪ್ರ. ವಾರ್ತೆ ಸಿಂಧನೂರು ಡಿ.19
ವಿದ್ಯೆ ಕಲಿಸಿ ಸಂಸ್ಕಾರ ನೀಡಿದ ಗುರುಗಳನ್ನು, ಮಕ್ಕಳ ಭವಿಷ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಪಾಲಕರನ್ನು ಮತ್ತು ಉತ್ತಮ ಆಚಾರ- ವಿಚಾರ ಕಲಿಸಿಕೊಟ್ಟ ಸಮಾಜದ ಹಿರಿಯರನ್ನು ಗೌರವ, ಪೂಜ್ಯ ಭಾವನೆಯಿಂದ ಕಾಣಬೇಕು. ಮಕ್ಕಳು ತಮ್ಮಲ್ಲಿರುವ ಅಹಂಕಾರವನ್ನು ತ್ಯಜಿಸಿ ಸಂಸ್ಕಾರವಂತರಾಗಬೇಕು. ಭಾಷೆ, ಭಾವನೆ, ನಡಿಗೆಯಿಂದ ಶುದ್ಧವಿದ್ದವರು ಬುದ್ಧನಂತಾಗುತ್ತಾರೆಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಎಂ. ಭಾಸ್ಕರ್ ಹೇಳಿದರು.
ತಾಲೂಕಿನ ಕುರಕುಂದಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದಿ. ವೆಂಕಣ್ಣ ಸಾಹುಕಾರ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿ' ಕುರಿತು ಉಪನ್ಯಾಸ ನೀಡಿದರು.
ಒಳ್ಳೆಯವರ ಸ್ನೇಹ ಮಾಡಿ: ಆರೋಗ್ಯ ಹಾಗೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ವ್ಯರ್ಥ ಸಮಯ ಹಾಳು ಮಾಡದೆ ಗುಣವಂತರ, ಚಾರಿತ್ರ್ಯವಂತರ ಸ್ನೇಹ ಮಾಡಬೇಕೆಂದು ಹಲವಾರು ಮಹತ್ವದ ಘಟನಾವಳಿಗಳನ್ನು ತಿಳಿಸಿ ಮಕ್ಕಳ ಮನಸೆಳೆದರು.
ತಿಡಿಗೋಳದ ಯುವ ಮುಖಂಡ ವಿಶ್ವನಾಥ ಬಜೆಗೌಡರ ಹಾಗೂ ದತ್ತಿ ದಾನಿ ಈಶಪ್ಪ ಸಾಹುಕಾರ ಕುರಕುಂದಿ ಅವರು ದಿ. ವೆಂಕಣ್ಣ ಸಾಹುಕಾರ ಕುರಕುಂದಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಆದಿತ್ಯ ಕಾಲೇಜಿನ ಉಪನ್ಯಾಸಕ ಹಾಗೂ ಪತ್ರಕರ್ತ ಅಶೋಕ ಬೆನ್ನೂರು ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿದರು.
ದತ್ತಿ ದಾನಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ದಿವಂಗತ ಬಸಮ್ಮ ಷಡಕ್ಷರಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು ಇವರ ಸ್ಮಾರಕ ದತ್ತಿಯನ್ನು ನೀಡಿದ ಕವಿ ಪಂಪಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ ಇವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಶಂಕ್ರಪ್ಪ ಬಪ್ಪೂರ ಮಾತನಾಡಿ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನವರು ಗ್ರಾಮೀಣ ಭಾಗದಲ್ಲಿ ದತ್ತಿ ಉಪನ್ಯಾಸವನ್ನು ಏರ್ಪಡಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ವಿಷಯಗಳನ್ನು ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿ ವಿಷಯ ಕುರಿತು ಉಪನ್ಯಾಸ ಕೊಡಿಸಿರುವ ಪರಿಷತ್ತಿನ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು.
ದತ್ತಿ ದಾನಿಗಳಾದ ಈಶಪ್ಪ ಸಾಹುಕಾರ ಕುರಕುಂದಿ, ತಿಡಿಗೋಳದ ಯುವ ಮುಖಂಡ ವಿಶ್ವನಾಥ ಬಜೇಗೌಡರ, ಎಸ್ಡಿಎಂಸಿ ಉಪಾಧ್ಯಕ್ಷ ವೀರಯ್ಯಸ್ವಾಮಿ, ರಡ್ಡೆಪ್ಪ, ಸಾಹಿತಿ ಬೀರಪ್ಪ ಶಂಭೋಜಿ, ಶಿಕ್ಷಕಿಯರಾದ ನಳಿನಿ, ವಸುಂದರಾ ಉಪಸ್ಥಿತರಿದ್ದರು. ಶಂಕ್ರಮ್ಮ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ವಸುಂದರಾ ಸ್ವಾಗತಿಸಿದರು. ಬೀರಪ್ಪ ಶಂಭೋಜಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಳಿನಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

