ಹದಗೆಟ್ಟ ರಸ್ತೆಗಳ ದುರಸ್ತಿಗೆ ಜ.10ರ ಗಡುವು; ಎಚ್ಚರಿಕೆ
ಮಸ್ಕಿ: ಲಿಂಗಸ್ಗೂರು-ಸಿಂಧನೂರು ರಾಜ್ಯ ಹೆದ್ದಾರಿಯ 55 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜ.10ರೊಳಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದಲ್ಲಿ ಪಕ್ಷಾತೀತವಾಗಿ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ವೇದಿಕೆಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ ಹಾಗೂ ಸಂಚಾಲಕ ಡಾ. ಶಿವಶರಣಪ್ಪ ಇತ್ಲಿ ಜಂಟಿಯಾಗಿ ಎಚ್ಚರಿಸಿದರು.
ಪಟ್ಟಣದಲ್ಲಿ ಮಂಗಳವಾರ ಭ್ರಮರಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ ಮುಖಂಡರೊಂದಿಗೆ ಚರ್ಚಿಸಿ ಮಾತನಾಡಿ, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಾದ ಸಿಂಧನೂರು-ಲಿಂಗಸ್ಗೂರು, ಮುದಗಲ್, ಕವಿತಾಳ, ಪೋತ್ನಾಳ, ಮಾರಲದಿನ್ನಿ ಪಾಮನಕೆಲ್ಲೂರು ರಸ್ತೆಗಳು ತುಂಬಾ ಹದಗೆಟ್ಟಿವೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಸಿಲುಕುತ್ತಿದ್ದಾರೆ. ಪ್ರಯಾಣಿಕರ ಗೋಳು ಹೇಳತೀರಾಗಿದೆ. ಡಿ.25ರಂದು ಮಾನವಿ ಪಟ್ಟಣಕ್ಕೆ ಸಿಎಂ ಆಗಮಿಸಲಿದ್ದು ಆ ಸಂದರ್ಭದಲ್ಲಿ ರಸ್ತೆಗಳ ದುಸ್ಥಿತಿ ವಿವರಿಸಿ ಪಕ್ಷಾತೀತವಾಗಿ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಸಿಎಂ ಜ.10ರೊಳಗೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಕೆ. ವೀರನಗೌಡ, ತಿಮ್ಮನಗೌಡ ಗುಡದೂರು, ಡಾ. ಎಂ. ಬಸವರಾಜ, ಎ.ಡಿ. ಉದಗಟ್ಟಿ, ಅಂದಾನಪ್ಪ ಗುಂಡಳ್ಳಿ, ಮಂಜುನಾಥ ಬಿಜ್ಜಳ, ಕಾರ್ಯದರ್ಶಿ ಬಿ.ಎಚ್. ದಿವಟರ್, ಸಹ ಕಾರ್ಯದರ್ಶಿಗಳಾದ ಬಸನಗೌಡ ಪೋಪಾ, ಮಲ್ಲಿಕಾರ್ಜುನ ಹೂವಿನಭಾವಿ, ಮಲ್ಲಪ್ಪ ಕುಡತಿನಿ, ರವಿಕುಮಾರ ಲದ್ದಿ, ಖಜಾಂಚಿ ಮೌನೇಶ ನಾಯಕ, ಸದಸ್ಯರಾದ ವಿರೇಶ ಸೌದ್ರ, ಶಿವಶಂಕ್ರಪ್ಪ ಹಳ್ಳಿ, ಅಶೋಕ ಠಾಕೂರ, ಜಿ. ವೆಂಕಟೇಶ ನಾಯಕ, ಕೃಷ್ಣ ಚಿಗರಿ ಸೇರಿ ಸಮಿತಿಯ ನೂರಾರು ಜನರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

