ರಾಯಚೂರು

ಕ್ಯಾಲೆಂಡರ್ ಬಿಡುಗಡೆ, ಸನ್ಮಾನ ಸಮಾರಂಭ

Published On :

ಕ.ಪ್ರ. ವಾರ್ತೆ, ರಾಯಚೂರು, ಡಿ.30
ನಗರದಲ್ಲಿ ಈಚೆಗೆ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭೀವೃದ್ಧಿ ಸಂಘದ ಜಿಲ್ಲಾ ಘಟಕದಿಂದ 2014ನೇ ವರ್ಷದ ವರ್ಣಮಯ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ವಸಂತರಾವ್ ಬಾಗಲವಾಡ ಉದ್ಘಾಟಿಸಿದರು. ಕ್ಯಾಲೆಂಡರ್‌ರನ್ನು ಪಂ.ಮುರಳೀಧರಾಚಾರ್ಯ ಗಲಗಲಿ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಶೇಷಗಿರಿರಾವ್ ಕುಲಕರ್ಣಿ ವಹಿಸಿದ್ದರು.
ಅತಿಥಿಗಳಾಗಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ, ಪ್ರಾಣೇಶ ಮುತಾಲಿಕ್, ಶಾರದಾ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ಡಿ.ಕೆ. ಮುರಳೀಧರ, ಗೋಪಾಲದಾಸ ದೇವದುರ್ಗ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಿ. ವೆಂಕಟೇಶ ಸ್ವಾಗತಿಸಿದರು. ವೆಂಕಟೇಶ ನವಲಿ ಪ್ರಧಾನ ಕಾರ್ಯದರ್ಶಿ ಪ್ರಾಸ್ತವಿಕ ಮಾತನಾಡಿದರು. ವಿಶೇಷ ಉಪನ್ಯಾಸವನ್ನು ಡಾ. ರಾಜಶ್ರೀ ಕಲ್ಲೂರಕರ ನೀಡಿದರು. ತಹಸೀಲ್ದಾರ್ ಅಶೋಕ ಜಹಗೀರದಾರ ಮತ್ತಿತರರಿದ್ದರು. ಸಂಘದ ವತಿಯಿಂದ ನೀಡುವ ಚಾಣುಕ್ಯ ಪುರಸ್ಕಾರವನ್ನು ಜಿಪಂ ಸಿಇಒ ಮುದ್ದುಮೋಹನ್ ಅವರಿಗೆ ಪ್ರದಾನ ಮಾಡಲಾಯಿತು. ಕಾತ್ಯಾಯನಿ ಪುರಸ್ಕಾರವನ್ನು ಡಾ. ಶೀಲಾದಾಸ್ ಅವರಿಗೆ ನೀಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಸಿ.ಎನ್. ಕುಲಕರ್ಣಿ, ರಾಘವೇಂದ್ರ ಕುಷ್ಟಗಿ, ಶ್ಯಾಮರಾವ್ ಹೇಮನೂರು, ರುಕ್ಮಿಣಿಬಾಯಿ, ರಾಘವೇಂದ್ರ ಚೂಡಾಮಣಿ, ಕು. ಸಾಧನಾ ಮುತಾಲಿಕ್ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಗುರುರಾಜ ದೇಶಪಾಂಡೆ, ಮನೋಹರರಾವ್, ರೂಪಾ ಬಂಡಿ, ನರಸಿಂಹಮೂರ್ತಿ, ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.