ರಾಯಚೂರು

ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಕ್ಕೆ ಆಗ್ರಹ

Published On :

ಮುದಗಲ್: ಸ್ಥಳೀಯ ಎಪಿಎಂಸಿಯಲ್ಲಿ 1 ವರ್ಷದಿಂದ ಟೆಂಡರ್ ಪ್ರಕ್ರಿಯೆ ರದ್ದಾಗಿದ್ದು, ಪುನಾ ಆರಂಭಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಆಗ್ರಹಿಸಿದೆ. ಸರ್ಕಾರ ರಾಜ್ಯದ ಪ್ರತಿಯೊಂದು ಎಪಿಎಂಸಿಯಲ್ಲಿ ರೈತರ ದವಸ-ಧಾನ್ಯವನ್ನು ಇ-ಟೆಂಡರ್ ಮೂಲಕ ಖರೀದಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಮಾಡಿದೆ.
 ಆದರೆ ವರ್ತಕರು ಮತ್ತು ಇಲ್ಲಿನ ಅಧಿಕಾರಿಗಳು ಹೊಂದಾಣಿಕೆ ಮೂಲಕ ರೈತರಿಂದ ನೇರವಾಗಿ ಧಾನ್ಯವನ್ನು ಖರೀದಿಸಲಾಗುತ್ತಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.
ರೈತರು ತರುವ 260 ಗ್ರಾಂ. ಚೀಲದಲ್ಲಿ ವ್ಯಾಪಾರಸ್ಥರು ತೂಕಮಾಡಿ, ಅದಕ್ಕೆ 1 ಕಿಲೋ ಬಾದ್, ಪ್ರತಿ ಚೀಲಕ್ಕೆ 2 ಕಿಲೋ ಬಾದ್ ಮುರಿಯಲಾಗುತ್ತಿದೆ. ಇದರಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ.
 ಅನ್ಯಾಯ ಸರಿಪಡಿಸುವಂತೆ ಲಿಂಗಸ್ಗೂರಿನ ಕಾರ್ಯದರ್ಶಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದು ಹಿನ್ನೆಡೆಗೆ ಕಾರಣವಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಕ್ಷಣವೇ ಎಪಿಎಂಸಿ ಅಧ್ಯಕ್ಷರು ಲಿಂಗಸ್ಗೂರ ಮತ್ತು ಮುದಗಲ್ ಭಾಗದ ರೈತರ ಸಭೆ ಕರೆದು ಚರ್ಚಿಸಿ, ರೈತರಿಗೆ ಅಗುತ್ತಿರುವ ಅನ್ಯಾಯ, ಮೋಸವನ್ನು ತಪ್ಪಿಸಬೇಕು.
 ಇಲ್ಲವಾದಲ್ಲಿ ಎಪಿಎಂಸಿ ಕಾರ್ಯಲಯದ ಮುಂದೆ ಧರಣಿ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಜಿಲ್ಲಾ ಸಂಘಟನೆ ಕಾರ್ಯಧ್ಯಕ್ಷ ಶೇಖರಗೌಡ ಚಿಕ್ಕಯರದಿಹಾಳ, ತಾಲೂಕು ಅಧ್ಯಕ್ಷ ಅಮರೇಶ ಮಾರಲದಿನ್ನಿ, ರೈತ ಮುಖಂಡರಾದ ಸಂಗಣ್ಣ ಮುದಗಲ್ಲ, ಹನುಮಂತ ಮಾರಲದಿನ್ನಿ, ಶಿವಗ್ಯಾನಪ್ಪ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.