ರಾಯಚೂರು

ಜನಸ್ನೇಹಿ ಕೇಂದ್ರದಲ್ಲಿ ಪ್ರಮಾಣ ಪತ್ರಕ್ಕಾಗಿ ಪರದಾಟ: ಆಕ್ರೋಶ

Published On :

ಮುದಗಲ್: ಪಟ್ಟಣದಲ್ಲಿ ಇತ್ತೀಚಿಗೆ ನೂತನವಾಗಿ ಆರಂಭವಾದ ನಾಡ ಕಾರ್ಯಾಲಯದಲ್ಲಿಯ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರು ಪ್ರಮಾಣ ಪತ್ರಕ್ಕಾಗಿ ನಿತ್ಯ ಅಲೆದಾಟ ನಡೆಸಿದ್ದು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತಹಸೀಲ್ದಾರರ ವಾಸಸ್ಥಳ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣಪತ್ರಗಳು, ರೈತರ ಪಹಣಿ ಪತ್ರಗಳನ್ನು ಪಡೆಯಲು ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಿ ತಿಂಗಳುಗಳೇ ಗತಿಸಿದರೂ, ಪ್ರಮಾಣ ಪತ್ರಗಳು ದೊರಕುತ್ತಿಲ್ಲವೆಂದು ರೈತರಾದ ಹನುಮಂತಪ್ಪ, ಗ್ಯಾನಪ್ಪ, ಭೋಜಪ್ಪ ದೂರಿದ್ದಾರೆ.                             
ಹರಸಾಹಸ: ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ ಎಂಬ ಕಾರಣದಿಂದ ಪ್ರಮಾಣ ಪತ್ರಗಳು ದೊರಕುವಲ್ಲಿ ವಿಳಂಬವಾಗುತ್ತಿವೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಅದನ್ನು ಸರಿಪಡಿಸಲು ಯಾವೊಬ್ಬ ಅಧಿಕಾರಿಗಳು ಮುಂದಾಗಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ. ಈ ಮುನ್ನ ನೆಮ್ಮದಿ ಕೇಂದ್ರದ ಮೂಲಕವಾದರೂ ವಾರದಲ್ಲಿ ಅಗತ್ಯ ಪ್ರಮಾಣ ಪತ್ರಗಳು ಸಿಗುತ್ತಿದ್ದವು. ಆದರೆ ಸರಕಾರದ ಮಹತ್ವಕಾಂಕ್ಷೆ ಜನಸ್ನೇಹಿ ಯೋಜನೆಯಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆಯನ್ನುಂಟು ಮಾಡಿದೆ ಎಂದು ದಾಖಲೆ ಪಡೆಯಲು ಬಂದ ನಿಂಗಪ್ಪ, ಗ್ಯಾನಪ್ಪ, ಹನುಮಂತ ದೂರಿದರು. ಬೆಳಿಗ್ಗೆಯಿಂದಲೇ ಸರದಿಯಲ್ಲಿ ಕಾದು ಪ್ರಮಾಣಪತ್ರ ಪಡೆಯಲು ವಿದ್ಯಾರ್ಥ್ಥಿಗಳು, ವಯೋವೃದ್ಧರು ನಿತ್ಯ ಹರಸಾಹಸ ಮಾಡುತ್ತಿದ್ದಾರೆ.
ಹಣ ವಸೂಲಿ:  ತ್ವರಿತವಾಗಿ ಪ್ರಮಾಣ ಪತ್ರಗಳು ಲಭಿಸಬೇಕಾದರೆ ಮಧ್ಯವರ್ತಿಗಳ ಮೊರೆ ಹೋಗಬೇಕಿದೆ. ಇದನ್ನೇ ನೆಪ ಮಾಡಿಕೊಂಡ ಮಧ್ಯವರ್ತಿಗಳು ಪ್ರಮಾಣ ಪತ್ರದ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿ ಸಮೂಹ ಆರೋಪಿಸಿದೆ. ಕೂಡಲೇ ತಹಸೀಲ್ದಾರರು ನಾಡ ಕಚೇರಿಯಲ್ಲಿ ಆಗಿರುವ ತಾಂತ್ರಿಕ ದೋಷವನ್ನು ನಿವಾರಿಸಿ ರೈತರಿಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂಬುಂದು ಸಾರ್ವಜನಿಕರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.