ಬಿಎಸ್‌ಆರ್ ಕಾರ್ಯಕರ್ತರ ಸಂಪರ್ಕ ಸಭೆ
ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಡಾಲರ್ಸ್ ಕಾಲೋನಿಯಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ವಾರ್ಡ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.
ಸಿಂಧನೂರು ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕೆ.ಕರಿಯಪ್ಪ ಮಾತನಾಡಿ, ತಾಲೂಕಿನಲ್ಲಿ ಈಗ ಯುವಕರ ದಂಡು ರಾಜಕೀಯದ ಕಡೆಗೆ ಹೆಚ್ಚಿನ ಆಸಕ್ತಿ ತೊರಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದರಿಂದ ತಾಲೂಕಿನ ಅಭಿವೃದ್ಧಿ ಸಾದ್ಯವಾಗುತ್ತದೆ. ಎಲ್ಲಿಯವರೆಗೂ ಯುವಕರು ಪ್ರಶ್ನಿಸುವುದನ್ನು ಕಲಿಯುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿ ಅಸಾಧ್ಯ. ಆದರೆ ಬಿಎಸ್‌ಆರ್ ಪಕ್ಷಕ್ಕೆ ವಿದ್ಯಾರ್ಥಿಗಳು ಹಾಗೂ ಯುವಕರು ಸ್ವ ಆಸಕ್ತಿಯಿಂದ ಬಂದು ಪಕ್ಷಕ್ಕೆ ಸೇರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪಕ್ಷದ ಕೋರ್ ಕಮಿಟಿ ಸದಸ್ಯ ಕೆ. ವಿರೂಪಾಕ್ಷಪ್ಪ, ಜಿಲ್ಲಾ ಸಂಚಾಲಕ ಸಯ್ಯದ್ ಮಟ್ಟಿಮನಿ, ನಗರ ಘಟಕದ ಅಧ್ಯಕ್ಷ ಮೊಹಿನುದ್ದಿನ್ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ನೂತನ ತಾಲೂಕಾ ಅಧ್ಯಕ್ಷ ರಂಗನಗೌಡ, ನಗರ ಘಟಕದ ಅಧ್ಯಕ್ಷ ಮೊಹಿನುದ್ದಿನ್ ಎತ್ಮಾರಿಯವರನ್ನು ವಾರ್ಡ್ ನಂ. 29,30, ಮತ್ತು 31 ರ ಕಾರ್ಯಕರ್ತರು ಸನ್ಮಾನಿಸಿದರು. ಸಭೆಯಲ್ಲಿ ಮುಖಂಡರಾದ ವೀರೇಶಪ್ಪ ಮಸ್ಕಿ, ಗಂಗಾಧರ ಹೂಗಾರ, ವೀರನಗೌಡ, ಬಿ.ಹರ್ಷ, ಕ್ಯಾಂಪಿನ ಹಿರಿಯರಾದ ಶಿವಣ್ಣ ಸಾರಾಯಬಾಗಿ, ತಮ್ಮಣ್ಣ, ಶಾಮಿದ್ಸಾಬ್ ಎತ್ಮಾರಿ, ಹುಸೇನಸಾಬ್ ಮದಗಲ್, ಟಿ.ಹನುಮಂತಪ್ಪ, ಮೌನೇಶ ನಾಯಕ, ದೇವಣ್ಣ ನಾಯಕ, ಆಸೀಫ್, ಮಕ್ಬುಲ್, ನಬಿ, ಮನ್ಸೂರ್, ರಾಜಾ ಪೇಂಟರ್, ಶಬ್ಬೀರ್, ರುದ್ರೇಶ ಕಟ್ಟಿಮನಿ, ರಾಮು ಬನ್ನದ್, ಮಲ್ಲಿಕಾರ್ಜುನ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

