ರಾಯಚೂರು

ಮಕ್ಕಳ ಸಾಹಿತ್ಯ ಸಮ್ಮೇಳನ; ಸಮಿತಿ (ಸುದ್ದಿ ಸಂಕ್ಷೇಪ)

Published On :

ಯಾದಗಿರಿ: ನಗರದಲ್ಲಿ ಫೆ.16ರಂದು ನಡೆಯಲಿರುವ ಜಿಲ್ಲಾ ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಸಮಿತಿ ರಚಿಸಲಾಯಿತು. ಉದ್ಯಮಿ ಬಂದಪ್ಪ ಅರಳಿ- ಅಧ್ಯಕ್ಷ, ಶ್ರೀನಿವಾಸ ಕರ್ಲಿ- ಉಪಾಧ್ಯಕ್ಷ, ಮಲ್ಲಿಕಾರ್ಜುನ ಬಿಳಾರ- ಪ್ರಧಾನ ಕಾರ್ಯದರ್ಶಿ, ಬಸವರಾಜ ಗೊಂದಳೆ, ಜ್ಞಾನೇಶ್ವರ ಸಂದೇನ್ಕರ್, ಸುರೇಶ ತಡಿಬಿಡಿ, ಅಶೋಕ ಕೆಂಭಾವಿ, ಅನಿಲ ಕುಮಾರ, ಪ್ರಕಾಶ ಅಂಗಡಿ, ಬಸರೆಡ್ಡಿ ಎಂ.ಟಿ. ಪಲ್ಲಿ- ಸಂಘಟನಾ ಕಾರ್ಯದರ್ಶಿ, ಮೊಗಲಪ್ಪ ನಾಯ್ಕಿನ್- ಖಜಾಂಚಿ, ಈಶ್ವರಪ್ಪ, ಅನಿಲಕುಮಾರ, ಡಾ. ಸಿದ್ದಲಿಂಗರೆಡ್ಡಿ ಮನೋಹರ ಬಡಿಗೇರಿ- ಆಹಾರ ಸಮಿತಿ, ಸೂಗಪ್ಪ ಪಾಟೀಲ್, ರಾಘವೇಂದ್ರ, ಬಸವರಾಜ ಅಳೆಮನಿ- ಕಲಾ ಜಾಥಾ ಮೆರವಣಿಗೆ ಸಮಿತಿ, ಶಂಕರ ಸೋನಾರ, ಮಲ್ಲೇಶ ಕುರಕುಂದಿ, ಮಲ್ಲಿಕಾರ್ಜುನ ಕೌಲಿ, ವಿಜಯಲಕ್ಷ್ಮಿ, ಬಸನಗೌಡ ಬಿರಾದಾರ- ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣಾ ಸಮಿತಿ, ಶಂಕರಗೌಡ ಪಾಟೀಲ್, ಕಾಂತಪ್ಪ ಬಾಗಲಿ, ಮಲ್ಲಯ್ಯ, ಹಣಮಂತ ಹೊಸಮನಿ, ಶ್ರೀನಿವಾಸ ಗುಂಟಿ, ಗೊಲ್ಲಾಳಪ್ಪ ಪತ್ತಾರ- ಶಿಸ್ತು ಪಾಲನಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸಲಹಾ ಸಮಿತಿಯ ಮಾರ್ಗದರ್ಶಕರಾಗಿ ಸಿ.ಎಂ. ಪಟ್ಟೇದಾರ ಹಾಗೂ ಬಸವರಾಜ ಅವರನ್ನು ನೇಮಿಸಲಾಗಿದೆ ಎಂದು ಗುರುಮಠಕಲ್‌ನ ಪ್ರಯೋಗ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಬಿ. ನಾಯ್ಕಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.