ರಾಯಚೂರು

ಮಂಡಳಿಗೆ ರಾಜ್ಯಪಾಲರೇ ಅಧ್ಯಕ್ಷರಾಗಲಿ

Published On :

ರಾಯಚೂರು: ಹೈ.ಕ.ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿಕೆಗೆ ಸಂಬಂಧಿಸಿ ಸ್ಥಾಪಿಸಲುದ್ದೇಶಿಸಿರುವ ಅಭಿವೃದ್ಧಿ ಮಂಡಳಿಗೆ ರಾಜ್ಯಪಾಲರನ್ನೇ ಅಧ್ಯಕ್ಷರಾಗಿಸಬೇಕು ಎಂಬುದು ಸೇರಿ ವಿವಿಧ ಅಂಶಗಳಿರುವ ನಿಯಮಾವಳಿಗಳನ್ನು ಕರಡು ವರದಿಯಲ್ಲಿ ಸೇರ್ಪಡೆಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ 371ನೇ ಕಲಂ(ಜೆ) ವಿಶೇಷ ಸ್ಥಾನಮಾನದ ಸಂಪುಟ ಉಪಸಮಿತಿಯ ಅಧ್ಯಕ್ಷ ಎಚ್.ಕೆ. ಪಾಟೀಲ್ ಅವರಿಗೆ ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್ ನೇತೃತ್ವದಲ್ಲಿ ಅಹವಾಲು ಸಲ್ಲಿಸಿ ಒತ್ತಾಯಿಸಲಾಯಿತು.
ಸದಸ್ಯತ್ವ ಕಲ್ಪಿಸಿ: ಹೈ.ಕ. ಭಾಗದ 39ಶಾಸಕರು, ಎಂಎಲ್ಸಿಗಳು, ಸಂಸದರಿಗೆ ಅಭಿವೃದ್ಧಿ ಮಂಡಳಿಯ ಸದಸ್ಯರಾಗಲು ಅವಕಾಶ ಕಲ್ಪಿಸಬೇಕು. ಕೃಷಿ, ಆರ್ಥಿಕ ಮತ್ತು ಕಾನೂನು ತಜ್ಞರನ್ನು ನೇಮಿಸಬೇಕು.ಎಲ್ಲ ಜಿಲ್ಲೆಗಳಿಗೆ ಮಂಡಳಿಯ ಸದಸ್ಯತ್ವ ಹೊಂದಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅನುದಾನಗಳ ವಿತರಣೆ, ಕಾಮಗಾರಿಗಳ ಪ್ರಗತಿ ಪರಿಶೀಲನೆ ಮತ್ತು ಲೋಪ ಎಸಗಿದರೆ ತಪ್ಪಿತಸ್ಥರಿಗೆ ಶಿಕ್ಷಿಸುವ ಅಧಿಕಾರ ಅಭಿವೃದ್ಧಿ ಮಂಡಳಿಗೆ ನೀಡಬೇಕು. ನೇಮಕಾತಿ ಪ್ರಕ್ರಿಯೆ ಕಳೆದ ವರ್ಷದಿಂದ ಸ್ಥಗಿತಗೊಳಿಸಿದ್ದು, ನೇಮಕಾತಿ ವೇಳೆ ಕನಿಷ್ಠ ಮೂರು ವರ್ಷದ ವಯೋವಾನದ ವಿನಾಯಿತಿ ಅಭ್ಯರ್ಥಿಗಳಿಗೆ ನೀಡುವಂತೆ ಒತ್ತಾಯಿಸಿದರು.
ಪರಿಸರ ಮಾಲಿನ್ಯ: ರಾಯಚೂರು ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ಒದಗಿಸಲಾಗುತ್ತಿದೆ. ಆದರೆ ರಾಯಚೂರು ಜಿಲ್ಲೆಗೆ ನಿರಂತರ ವಿದ್ಯುತ್ ಒದಗಿಸುವ ಕಾರ್ಯ ಇದುವರೆಗೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ನಿರಂತರ ವಿದ್ಯುತ್ ಒದಗಿಸಬೇಕು. ಆರ್‌ಟಿಪಿಎಸ್‌ನಿಂದ ಪರಿಸರ ಮಾಲಿನ್ಯ ಹೆಚ್ಚಳವಾಗಿದ್ದು, ಪರಿಸರ ಸಂರಕ್ಷಣೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.