ರಾಯಚೂರು

ನಾಳೆಯಿಂದ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್

Published On :

ರಾಯಚೂರು: ಪ್ರಸಕ್ತ ಸಾಲಿನ ಘಟಕದೊಳಗಿನ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಜು.10ರಿಂದ 13ರವರೆಗೆ ಗುಲ್ಬರ್ಗದಲ್ಲಿ ಅಪರ ಆಯುಕ್ತರ ಕಚೇರಿ ಶಿಕ್ಷಣ ಇಲಾಖೆಯಲ್ಲಿ ನಡೆಯಲಿದೆ.
ಈಗಾಗಲೇ ಆದ್ಯತಾ ಪಟ್ಟಿಯನ್ನು ವೆಬ್‌ಸೈಟ್ ವಿಳಾಸ ಢಿಢಿಢಿ.್ಛಠ್ಝ್ಜ್ಡಟಛಿಛ್ಠ್ಜಛ.್ಞಛ್ಠ.ಟ್ಝ್ಛಿ.್ಝಟಿರಲ್ಲಿ ಪ್ರಕಟಿಸಿದ್ದು, ಅರ್ಹ ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗಬೇಕು. ಕೋರಿಕೆ ವರ್ಗಾವಣೆ ಬಯಸಿರುವ ಪ್ರೌಢಶಾಲಾ ಶಿಕ್ಷಕರು ಕೌನ್ಸೆಲಿಂಗ್ ದಿನಾಂಕಗಳಂದು ತಪ್ಪದೇ ಹಾಜರಾಗಲು ಸೂಚಿಸಲಾಗಿದೆ.
ಎಲ್ಲಾ ಶಿಕ್ಷಕರು ಅರ್ಜಿಯ ಪ್ರತಿ, ಬಿಇಒ ಪ್ರತಿ, ಪರಿವೀಕ್ಷಣಾ ಅವಧಿ ಘೋಷಣಾ ಬಗ್ಗೆ ದಾಖಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸೇವಾ ಪ್ರಮಾಣ ಪತ್ರದ ಪ್ರತಿ, ವೈದ್ಯಕೀಯ ಆಧಾರದ ಪ್ರಕರಣದಲ್ಲಿ ಹಾಗೂ ಅಂಗವಿಕಲ ಪ್ರಕರಣದಲ್ಲಿ ಜಿಲ್ಲಾ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ, ವಿಧವಾ ಪ್ರಕರಣದಲ್ಲಿ ಪತಿಯ ಮರಣ ಸಮರ್ಥನಾ ಪ್ರಮಾಣ ಪತ್ರ,  ಮಾಜಿ ಸೈನಿಕರಾದರೆ ಸೈನಿಕ ಇಲಾಖೆಯ ಪ್ರಮಾಣ ಪತ್ರ, ಪತಿ ಅಥವಾ ಪತ್ನಿ ಪ್ರಕರಣವಾದರೆ ಪತಿ ಅಥವಾ ಪತ್ನಿ ಸರ್ಕಾರಿ ಸೇವೆಯಲ್ಲಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ, ದಂಪತಿ ಪ್ರಕರಣದಲ್ಲಿ ಒಬ್ಬರು ಖಾಸಗಿ ಉದ್ಯೋಗಿಯಾಗಿದ್ದರೆ, ಸಂಸ್ಥೆಯ ಪ್ರಮಾಣ ಪತ್ರವಲ್ಲದೆ ನಿಗದಿತ ನಮೂನೆಯಲ್ಲಿ ವಾಸಸ್ಥಳದ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ತಿಳಿಸಲಾಗಿದೆ.
ಕೌನ್ಸೆಲಿಂಗ್‌ಗೆ ತೆರಳುವ ಶಿಕ್ಷಕರು ಕಡ್ಡಾಯವಾಗಿ ಸಾಂದರ್ಭಿಕ ರಜೆ ಪಡೆದು ಪ್ರಯಾಣಿಸಬೇಕು ಎಂದು ಡಿಡಿಪಿಐ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.