ಸುರಕ್ಷಾ ಯೋಜನೆಗಳಿಂದ ಜನಸಂಖ್ಯೆ ನಿಯಂತ್ರಣ: ಡಾ. ಕ್ಯಾಲಕೊಂಡ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.11
ವಿಶ್ವದ ಜನಸಂಖ್ಯೆ 1987 ಜುಲೈ 11ರಂದು 500 ನೂರು ಕೋಟಿ ದಾಟುವ ದಿನದಿಂದ ಪ್ರತಿ ವರ್ಷ ಈ ದಿನ ವಿಶ್ವ ಜನಸಂಖ್ಯೆ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇಂದು ಹುಟ್ಟಿದ ಮಗುವಿನ ಸಂರಕ್ಷಣೆಗೆ 7 ಮಾರಕ ರೋಗಗಳ ವಿರುದ್ಧ ಲಸಿಕೆ, ಗರ್ಭಿಣಿಯಾದಾಗ ಅಗತ್ಯ ಪರೀಕ್ಷೆಗಳನ್ನು ಹಾಗೂ ಎಸ್ಸಿ, ಎಸ್ಟಿ ಹಾಗೂ ಬಿಪಿಎಲ್ ಕುಟುಂಬಗಳಿಗೆ ಮಡಿಲು ಕಿಟ್ಟು, ಜನನಿ ಸುರುಕ್ಷಾ ಯೋಜನೆ, ಪ್ರಸೂತಿ ಆರೈಕೆಗಳಂತಹ ಧನ ಸಹಾಯದ ಯೋಜನೆಗಳು ಇದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಕರವೀರಪ್ರಭು ಕ್ಯಾಲಕೊಂಡ ಹೇಳಿದರು.
ತಾಲೂಕಾ ಆಡಳಿತ, ತಾಲೂಕಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ವಿವಿದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಹುಟ್ಟಿದ ಮಗುವನ್ನು ಸಂರಕ್ಷಿಸಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ಘೋಷಣೆಯಡಿ ಜನಸಂಖ್ಯೆ ನಿಯಂತ್ರಿಸಲು ಸಹಕರಿಸಬೇಕು. ಕುಟುಂಬ ಕಲ್ಯಾಣ ವಿಧಾನಗಳ ಸೂಕ್ತ ಅನುಷ್ಠಾನ ಮೂಲಕ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸಿ ನಾಗಾಲೋಟದಿಂದ ಏರುತ್ತಿರುವ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಸೈಯದ್ ಹಸನ್ ಹುಸೇನಿ ಮಾತನಾಡಿ, ಕುಟುಂಬ ನಿಯಂತ್ರಣಕ್ಕೆ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವ್ಯಶಕತೆಯಿದೆ. ಮೂಢನಂಬಿಕೆ, ಅನಕ್ಷರತೆಯನ್ನು ತೊಲಗಿಸಿ ಪ್ರತಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ ಕಾಪರ್ಟಿ, ನುಂಗುವ ಮಾತ್ರೆ, ನಿರೋಧಗಳಂತಹ ತಾತ್ಕಾಲಿಕ ವಿಧಾನಗಳ ಮೂಲಕ ಹಾಗೂ ಉದರ ದರ್ಶಕ ಶಸ್ತ್ರ ಚಿಕಿತ್ಸೆ, ಟುಬ್ಯೆಕಟಮಿ, ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ (ಎನ್.ಎಸ್.ವಿ) ಗಳ ಉಪಯೋವಿಕೆಯಿಂದ ಜನಸಂಖ್ಯೆ ನಿಯಂತ್ರಿಸಬಹುದಾಗಿದೆ. ಪ್ರಸ್ತುತ ಇವುಗಳ ಉಪಯೋಗದಿಂದ ಕರ್ನಾಟಕದಲ್ಲಿ 2.5 ಕೋಟಿ ಜನನಗಳನ್ನು 1981ರಿಂದ ತಡೆಗಟ್ಟಲಾಗಿದೆ ಎಂದರು.
ತಾಲೂಕಾ ಪಂಚಾಯ್ತಿ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿರಸ್ತೆದಾರ ಟಿ.ಆರ್.ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಬೇಂದ್ರಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಬಾಯಿ, ನಗರಸಭೆ ಅಭಿಯಂತರಾದ ಗಂಗಾಧರ, ವೈದ್ಯಾಧಿಕಾರಿಗಳಾದ ಡಾ. ರಮ್ಯಾದೀಪಿಕ, ಉಪನ್ಯಾಸಕರಾದ ಮಂಜುನಾಥ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ವೀರೇಶ, ಡಾ. ವಿರುಪಾಕ್ಷಿ ಎ.ಐ. ಪಾಟೀಲ್, ನಗರಸಭೆ ವ್ಯವಾಸ್ಥಾಪಕ ಗುರುರಾಜ, ದೈಹಿಕ ಶಿಕ್ಷಣ ಸಂಯೋಜಕ ಕರಂಡಿ, ಡಾ. ಶಂಕರಾಚಾರ್ಯ, ಎಪ್.ಎ. ಹಣಗಿ, ಗುರುಶಾಂತಮ್ಮ, ಸಣ್ಣ ಮೀನಾಕ್ಷಮ್ಮ, ಶಿವನಮ್ಮ, ಸುಜಾತ, ಮಲ್ಲಿಕಾರ್ಜುನ, ಶಾಂತಪ್ಪ, ರಂಗನಾಥ, ಈರಣ್ಣ, ಹುಸೇನಪ್ಪ, ರಾಮಚಂದ್ರರಾವ್, ಓಂ. ಪ್ರಸಾದ, ಹನುಮಂತಪ್ಪ, ಶಿವರಾಜ, ಹಾಗೂ ಶಾರದ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ ಸ್ವಾಗತಿಸಿ ನಿರೂಪಿಸಿದರು. ಬಸ್ಸಯ್ಯ ವಂದಿಸಿದರು.
ಇದೇ ಸಂದರ್ಭದಲ್ಲಿ ಶಾರದ ಮಹಿಳಾ ಕಾಲೇಜಿನಲ್ಲಿ ಜರುಗಿದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಭಾಷಣ ಸ್ಪರ್ಧೆಯ ವಿಜೇತರಾದ ಆರತಿ, ಲಕ್ಷ್ಮೀ, ವಾಣಿ, ಮುತ್ತಣ್ಣ, ಇವರಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

