ಪಡಿತರಕ್ಕೆ ಹೆಚ್ಚಿನ ಹಣ ವಸೂಲು: ಕ್ರಮಕ್ಕೆ ಒತ್ತಾಯ
ರಾಯಚೂರು: ಜಿಲ್ಲೆಯಲ್ಲಿ ಪಡಿತರ ವಿತರಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ಹೆಚ್ಚುವರಿಯಾಗಿ 200 ಪಡೆಯಲಾಗುತ್ತಿದ್ದು, ಇಂಥ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜೈ ಕನ್ನಡ ರಕ್ಷಣಾ ವೇದಿಕೆ ಆಗ್ರಹಿಸಿದೆ.ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರಿಗೆ ಈಚೇಗೆ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಿರುವ ಸಂಘಟನೆ ಕಾರ್ಯಕರ್ತರು, ಕಳೆದ ವರ್ಷ ಜಿಲ್ಲೆಯಲ್ಲಿ ಪಡಿತರ ವಿತರಣೆ ಪ್ರಕ್ರಿಯೆಯ ವೇಳೆ ಪ್ರತಿ ಕುಟುಂಬದಿಂದ 50 ಪಡೆದು ಭಾವಚಿತ್ರ ಪಡೆಯಲಾಗಿತ್ತು. ಆದರೆ ಇದುವರೆಗೆ ಕಾರ್ಡುಗಳನ್ನು ವಿತರಿಸಿಲ್ಲ ಎಂದು ಆರೋಪಿಸಿದರು.
ಈಚೇಗೆ ಪುನಾ ಪಡಿತರ ಚೀಟಿ ಪ್ರಕ್ರಿಯೆ ಆರಂಭಿಸಿದ್ದು ಮತ್ತೆ ಪ್ರತಿ ಕುಟುಂಬದಿಂದ 200 ಹಣ ಪಡೆಯಲಾಗುತ್ತಿದೆ. ಈಗಾಗಲೇ 50 ನೀಡಿದ್ದವರೂ ಪುನಾ ಪಡಿತರ ಚೀಟಿ ಪಡೆಯುವಂತೆ ಹೇಳಲಾಗುತ್ತಿದೆ. ಭಾವಚಿತ್ರ ತೆಗೆಯುವ ಏಜೆನ್ಸಿಗಳವರು ಸಾರ್ವಜನಿಕರಿಂದ ನಿಗದಿತ ಹಣಕ್ಕಿಂತ ಹೆಚ್ಚಿನ ಮೊತ್ತ ಕೀಳುತ್ತಿದ್ದಾರೆಂದು ದೂರಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ಇಂಥ ಏಜೆನ್ಸಿಗಳವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಅದರಲ್ಲೂ ಬಡವರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಪ್ರತಿಯೊಂದೂ ಗ್ರಾಮದಲ್ಲಿ ಭಾವಚಿತ್ರ ಮತ್ತು ಹೆಬ್ಬೆರಳ ಗುರುತು ಪಡೆಯುವ ಕೇಂದ್ರ ತೆರೆಯುವಂತೆ ಆಗ್ರಹಿಸಿದರು.ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ಟಿ. ನರಸಪ್ಪ, ಪ್ರಮುಖರಾದ ಉರುಕುಂದಿ, ಎಂ. ಶರಣಬಸವ, ವೆಂಕಟಸ್ವಾಮಿ, ಈಶ್ವರ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

