ರಾಯಚೂರು

ವಿದ್ಯುತ್ ಉತ್ಪಾದನೆ: ಆರ್ಟಿಪಿಎಸ್ ಸಾಧನೆ- ವೇಣುಗೋಪಾಲ್

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಜು.21
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಕಳಪೆ ಕಲ್ಲಿದ್ದಲು ಪೂರೈಕೆಯಾಗುತ್ತಿದ್ದರೂ, ರಾಜ್ಯದ ವಿದ್ಯುತ್ ಬೇಡಿಕೆ ನೀಗಿಸುವ ನಿಟ್ಟಿನಲ್ಲಿ ವಿದ್ಯುತ್ ಕೇಂದ್ರದ ಉದ್ಯೋಗಿಗಳು ನಿರಂತರ ಶ್ರಮಿಸುತ್ತಿದ್ದಾರೆ. ನಿಗಮವು ವಿದ್ಯುತ್ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದೆ ಎಂದು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ವೇಣುಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶಕ್ತಿನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಕೆಪಿಸಿಯಿಂದ ಆಯೋಜಿಸಿದ್ದ ಆರ್‌ಟಿಪಿಎಸ್‌ನ 44ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸ್ಥೆಯ ಉದ್ಯೋಗಿಗಳು, ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸಾಧನೆ ಮೆರೆದಿದ್ದಾಗಿ ತಿಳಿಸಿದರು.
ಜಮೀನು ನೀಡಿದವರಿಗೆ ಶೀಘ್ರ ಉದ್ಯೋಗಾವಕಾಶ: ವಿದ್ಯುತ್ ಕೇಂದ್ರದ ಘಟಕಗಳು ವಿವಿಧ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ನಿಗಮಕ್ಕೆ ಬಹುಮಾನ ತಂದುಕೊಟ್ಟಿವೆ. ಅದರ ಹಿಂದೆ ನೌಕರರ ಪರಿಶ್ರಮವಿದೆ ಎಂದ ಅವರು, ನಿಗಮಕ್ಕೆ ಜಮೀನು ನೀಡಿದ 45 ಜನರಿಗೆ ಸದ್ಯದಲ್ಲಿಯೇ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಪ್ರಗತಿಗೆ ಸಹಕಾರ, ಶ್ರಮ ಕಾರಣ: ನಿವೃತ್ತ ಎಂಜಿನಿಯರ್ ಎನ್.ಎಸ್. ಬೇಂದ್ರೆ, ಕೆಪಿಸಿ ವತಿಯಿಂದ ಆರಂಭದಲ್ಲಿ 650 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಆದರೆ ಸದ್ಯ 6,500 ಮೆವ್ಯಾ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇದಕ್ಕೆ ಎಂಜಿನಿಯರುಗಳು, ಉದ್ಯೋಗಿಗಳ ಸಹಕಾರ, ಶ್ರಮ ಕಾರಣ ಎಂದರು.
ಸಮಾರಂಭದಲ್ಲಿ ಕೆಪಿಸಿ ಅಧಿಕಾರಿಗಳಾದ ಡಿ.ಚಂದ್ರಕಾಂತ ದೊಂಡಿಬಾ, ಮಹೇಂದ್ರ, ಪ್ರಶಾಂತ್, ವೆಂಕಟಾಚಲಪತಿ, ನಾರಾಯಣಸ್ವಾಮಿ, ಡಾ. ಗೋಕುಲಆನಂದ್, ಚಿನ್ನಸೋಮಯ್ಯ ಸೇರಿದಂತೆ ಅನೇಕರಿದ್ದರು. ಆರ್‌ಟಿಪಿಎಸ್‌ನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳನ್ನು ಈ ವೇಳೆ ನಿಗಮದಿಂದ ಸನ್ಮಾನಿಸಲಾಯಿತು. ಕೆಪಿಸಿ ನೌಕರರು ಮತ್ತು ಜನತೆ ಸಮಾರಂಭದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.