ರಾಯಚೂರು

'ತಿಳಿವಳಿಕೆ ನೀಡಿ ಪಾಲಿಸಿ ತನ್ನಿ'

Published On :

ಸಿಂಧನೂರು: ಎಲ್‌ಐಸಿ ಹೊಸ ವಿಮಾ ಪಾಲಿಸಿಗಳ ಮೇಲೆ ಮುಂಬರುವ ದಿನಗಳಲ್ಲಿ ಸೇವಾ ತೆರಿಗೆ ಬರುವ ಸಂಭವವಿದ್ದು ವಿಮಾ ಪ್ರತಿನಿಧಿಗಳು ತಮ್ಮ ಪಾಲಸಿದಾರರಿಗೆ ತಿಳಿವಳಿಕೆ ನೀಡಿ ಹೆಚ್ಚಿನ ಪಾಲಸಿಗಳನ್ನು ನೀಡುವಲ್ಲಿ ತೊಡಗಬೇಕೆಂದು ಲಿಯಾಫಿ ವಿಮಾ ಸಂಘಟನೆಯ ಅಧ್ಯಕ್ಷ ಕುಮಾರಸ್ವಾಮಿ ಸಲಹೆ ನೀಡಿದರು.
ನಗರದ ಯಲ್ಲಮ್ಮ ತೋಟದಲ್ಲಿ ಲೈಫ್ ಇನ್ಶೂರೆನಸ್ ಏಜೆಂಟ್ ಫೆಡರೇಷನ್ ಆಫ್ ಇಂಡಿಯಾದಿಂದ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿನಿಧಿಗಳು ತಮ್ಮ ಪಾಲಸಿದಾರರಿಗೆ ಹೊಸ ಪಾಲಸಿಗಳನ್ನು ಗಮನಕ್ಕೆ ತರಬೇಕು. ಇದರಿಂದ ಹೆಚ್ಚಿನ ವಿಮಾ ಪಾಲಸಿಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದರು.
ಲಿಯಾಫಿ ಕಾರ್ಯದರ್ಶಿ ಉಮೇಶ ಪವಾರ ಮಾತನಾಡಿ, ಈಗಾಗಲೇ ಪ್ರತಿನಿಧಿತ್ವವವನ್ನು ಕಳೆದುಕೊಂಡವರು ಒಂದು ವರ್ಷದ ನಂತರ ಮರು ನೇಮಕ ಮಾಡುವ ತೀರ್ಮಾನ ಪ್ರಕ್ರಿಯೆ ಆರಂಭವಾಗಿದ್ದು, ಅಂತಹ ಪ್ರತಿನಿಧಿಗಳು ಲೈಸನ್ಸ್ ಶುಲ್ಕ ನೀಡಿ ಪ್ರತಿನಿಧಿತ್ವವನ್ನು ಪುನರ್ ನವೀಕರಣ ಮಾಡಬಹುದು. ಯಾವುದೇ ಕುಂದುಕೊರತೆಗಳು ಇದ್ದರೂ ಲಿಯಾಫಿಗೆ ತಿಳಿಸಿದರೆ ಅದಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ಸಂಘ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.
ಖಜಾಂಚಿ ಎನ್.ಶಿವ, ಏಜೆಂಟರಾದ ವಿ.ಗಿರಿಶರೆಡ್ಡಿ, ವೆಂಕಟೇಶ ಉದ್ಬಾಳ, ಪ್ರಸಾದ, ಕೆ.ನಬಿಸಾಬ, ಗುರುರಾಜ ಜಾಗೀರದಾರ, ಎಂ.ಕೆ.ಜಗ್ಗೆಶ, ಬಸವರಾಜ ಸೌದ್ರಿ, ಪ್ರಕಾಶ ಮಸ್ಕಿ ಸೇರಿದಂತೆ ಅನೇಕ ವಿಮಾ ಪ್ರತಿನಿಧಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.