ರಾಯಚೂರು

ಕಾಡು ಹಂದಿ ಹಾವಳಿ ತಡೆಗೆ ಒತ್ತಾಯ

Published On :

ಚಿತ್ತಾಪುರ: ತಾಲೂಕಿನ ಭಂಕೂರ ಜಿಪಂ ವ್ಯಾಪ್ತಿಯ ಹೋನಗುಂಟಾ, ಗೋಳಾ(ಕೆ), ಕಡೆಹಳ್ಳಿ ಗ್ರಾಮಗಳಲ್ಲಿ ರೈತರು ಬಿತ್ತನೆ ಮಾಡಿರುವ ಬೀಜವನ್ನು ತಿಂದು ಹಾಳು ಮಾಡುತ್ತಿರುವ ಕಾಡು ಹಂದಿಗಳ ಕಾಟವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ತಾಲೂಕು ಅಧ್ಯಕ್ಷ ಶಶಿಕಾಂತ ಪಾಟೀಲ್ ಬೆಳಗುಂಪಾ, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೋರಿ ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಕಳೆದ ಹಲವಾರು ದಿನಗಳಿಂದ ಜಿಟಿ ಜಿಟಿ ಮಳೆ ಬಂದಿರುವುದರಿಂದ ರೈತರು ಬಿತ್ತಣಿಕೆ ಮಾಡುವಲ್ಲಿ ತೊಂದರೆ ಅನುಭವಿಸುವಂತಾಗಿದೆ. ಆದರೆ ಬಿತ್ತಣಿಕೆ ಮಾಡಿದ ಹೊಲದಲ್ಲಿ ಕಾಡು ಹಂದಿಗಳು ಬೀಜಗಳನ್ನು ತಿಂದು ಹಾಳು ಮಾಡುತ್ತಿರುವುದರಿಂದ ರೈತ ಇನ್ನು ಕಂಗಾಲಾಗುತ್ತಿರುವನು. ಒಂದು ಕಡೆ ಮಳೆ ಮತ್ತೊಂದು ಕಡೆ ಕಾಡು ಹಂದಿಗಳ ಕಾಟದಿಂದ ರೈತರು ಕೃಷಿ ಚಟುವಟಿಕೆ ಮಾಡದೆ ತೊಂದರೆ ಪಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಅರಣ್ಯ ಇಲಾಖೆಯವರು ಗಮನ ಹರಿಸದ ಕಾರಣ ರೈತನು ತೊಂದರೆ ಪಡುವಂತಾಗಿದೆ ಎಂದು ದೂರಿದ್ದಾರೆ.
ಮಳೆಯಿಂದ ಬಿತ್ತನೆ ಮಾಡದೆ ಹಾಗೂ ಬಿತ್ತನೆ ಮಾಡಿದ ಬೀಜ, ಗೊಬ್ಬರ ಕಳೆದುಕೊಂಡು ತೊಂದರೆಯಲ್ಲಿರುವ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸಿ ಕೊಡಬೇಕು. ಹೋನಗುಂಟಾ, ಗೋಳಾ(ಕೆ), ಕಡೆಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಇರುವ ಕಾಡು ಹಂದಿ ಕಾಟ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ನಿರ್ಲಕ್ಷ್ಯ ಮಾಡಿದಲ್ಲಿ ಬಿಜೆಪಿ ಪಕ್ಷವು ಈ ವಿಷಯದ ಕುರಿತು ರೈತರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಭಂಕೂರ ಶಕ್ತಿ ಕೇಂದ್ರದ ಅನೀಲಕುಮಾರ್ ಅಲ್ಲಮಶೆಟ್ಟಿ, ಪ್ರಕಾಶ ರಾಠೋಡ, ವಿಜಯಕುಮಾರ್ ಮಾಣಿಕ, ಶಿವಕುಮಾರ ಹೂಗಾರ, ರಮೇಶ ಸಾಹು, ಭರತ ಮುತ್ತಗಿ ಅವರು ಎಚ್ಚರಿಕೆ ನೀಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.